ಯುವಕರಿಗೆ ರಾಜಕೀಯದಲ್ಲಿ ಮನ್ನಣೆ ಸಿಗಲಿ

ಯಾದಗಿರಿ ನಗರದ ಜವಾಹರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ಯುವ ಸಂಸತ್​ ಸ್ಪರ್ಧೆಯನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ಶ್ರೀಶೈಲ್​ ಜಿ., ಡಾ.ರವಿಂದ್ರನಾಥ ಹೊಸಮನಿ, ರುದ್ರಗೌಡ ಇತರರಿದ್ದರು.
ಯಾದಗಿರಿ ನಗರದ ಜವಾಹರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ಯುವ ಸಂಸತ್​ ಸ್ಪರ್ಧೆಯನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ಶ್ರೀಶೈಲ್​ ಜಿ., ಡಾ.ರವಿಂದ್ರನಾಥ ಹೊಸಮನಿ, ರುದ್ರಗೌಡ ಇತರರಿದ್ದರು.
Published on: 

ಯಾದಗಿರಿ: ಯುವಕರು ಉತ್ತಮ ಶಿಕ್ಷಣ ಪಡೆದು ರಾಜಕೀಯಕ್ಕೆ ಬಂದು ತಮ್ಮದೇ ಆದ ಛಾಪು ಮೂಡಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.

ನಗರದ ಜವಾಹರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜವಾಹರ ಸಂಯುಕ್ತ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ 2026-27ನೇ ಸಾಲಿನ ಪಿಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ರಾಜಕೀಯದಲ್ಲಿಯೂ ಯುವಕರಿಗೆ ಸೂಕ್ತ ಸ್ಥಾನಮಾನ ಮತ್ತು ಮನ್ನಣೆ ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಯುವಕರು ರಾಜಕೀಯವಾಗಿ ಮುಂಚೂಣಿಗೆ ಬಂದರೆ ಮಾತ್ರ ರಾಜ್ಯ ಮತ್ತು ದೇಶದ ಅಭಿವೃದ್ಧಿ ಸಾಧ್ಯ ಎಂದರು.

ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಗಳೆರಡಿದ್ದು, ಪ್ರತಿಯೊಂದು ವಿಷಯದಲ್ಲೂ ಕೇವಲ ವಿರೋಧಿಸುವುದಕ್ಕಿಂತ ರಚನಾತ್ಮಕವಾಗಿ ಯೋಚಿಸಿ ಸರ್ಕಾರದ ಉತ್ತಮ ಕೆಲಸಗಳನ್ನು ಬೆಂಬಲಿಸುವುದು ಬಹಳ ಮುಖ್ಯ ಎಂದರು. ಕೇವಲ ಪಗಳ ನಡುವಿನ ವಾದ-ವಿವಾದಗಳಿಗಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಧೈರ್ಯವಂತರಾಗಿ ಯುವಕರು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯರ ಸಂದ ಖಜಾಂಚಿ ಶ್ರೀಶೈಲ್​ ಜಿ. ಮಾತನಾಡಿ, ಅಧಿವೇಶನಗಳ ಕಾರ್ಯವೈಖರಿ ಮತ್ತು ಶಾಸಕಾಂಗದ ನಡವಳಿಕೆಗಳನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ಈ ವೇದಿಕೆ ಸಹಕಾರಿ. ಇಂದು ಸಂಸತ್​ ಹಾಗೂ ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿರುವುದು ದೇಶದ ಪ್ರಗತಿಗೆ ಮುನ್ಸೂಚನೆಯಾಗಿದೆ. ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯ ಡಾ.ರವೀಂದ್ರನಾಥ ಹೊಸಮನಿ ಮಾತನಾಡಿ, ದೇಶದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಭಾರತದ ಸಂವಿಧಾನ ಅತ್ಯಂತ ಮುಖ್ಯವಾಗಿದೆ. ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು. ಪ್ರಾಚಾರ್ಯ ಸಂದ ರಾಜ್ಯ ಪ್ರತಿನಿಧಿ ಮಲ್ಕನಗೌಡ ಪಾಟೀಲ್​, ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಶರಣಪ್ಪ ರಾಹುಲ್​, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆಯೇ ಇತರರಿದ್ದರು.