ನೆಲ-ಜಲ, ಭಾಷೆ-ಸಂಸ್ಕೃತಿ ಉಳಿಸಿ ಬೆಳೆಸೋಣ

ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲ್​, ಡಿಸಿ ರಾಹುಲ್​ ಪಾಂಡ್ವೆ, ಎಸ್​ಪಿ ಪೃಥ್ವಿಕ್​ ಶಂಕರ್​, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರಿದ್ದರು.
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲ್​, ಡಿಸಿ ರಾಹುಲ್​ ಪಾಂಡ್ವೆ, ಎಸ್​ಪಿ ಪೃಥ್ವಿಕ್​ ಶಂಕರ್​, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರಿದ್ದರು.
Published on: 

ಯಾದಗಿರಿ: ಕರ್ನಾಟಕ ಶಾಂತಿ, ಸೌಹಾರ್ದ ಹಾಗೂ ನೆಮ್ಮದಿಯಿಂದ ಬೆಳಗಬೇಕು. ನಾಡಿನ ನೆಲ&ಜಲ, ಭಾಷೆ ಮತ್ತು ಸಂಸತಿ ಅಸ್ತಿತ್ವವನ್ನು ಉಳಿಸಿ ಬೆಳೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸಿ ಸಾಂಸ್ಕೃತಿಕ ಕೊಡುಗೆ ನೀಡಿದ ಮಹಾನ್​ ಚೇತನರಿಗೆ ನಮಿಸುವುದಾಗಿ ಹೇಳಿದರು.

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಜತೆ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಜನರ ಮನೆಬಾಗಿಲಿಗೆ ತಲುಪಿಸುತ್ತಿದೆ. ಗಿರಿ ಜಿಲ್ಲೆಯಲ್ಲಿ ಐದು ಯೋಜನೆ ಫಲಾನುಭವಿಗಳಿಗೆ ಆದ ಲಾಭದ ಬಗ್ಗೆ ವಿವರಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಮೇವಿನ ಬೆಲೆ ಹೆಚ್ಚಳದಿಂದ ಹಸುಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಹಾಲು ಉತ್ಪಾದಕರ ಬಹುದಿನಗಳ ಬೇಡಿಕೆ ಮನಗಂಡು ಹಾಲಿನ ದರ ಹೆಚ್ಚಿಸಲಾಗಿದೆ ಹೊರತು, ಇದರಿಂದ ಸರ್ಕಾರಕ್ಕೆ ಏನೂ ಲಾಭವಿಲ್ಲ ಎಂದ ಡಾ.ಪಾಟೀಲ್​, ಬಸ್​ ದರ ಹೆಚ್ಚಳದ ಸಾಧಕ-ಬಾಧಕ ಗಮನಿಸಿ ಸಂಬಂಧಪಟ್ಟ ಇಲಾಖೆಯವರು ನಿರ್ಧಾರ ಕೈಗೊಳ್ಳುತ್ತಾರೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅದರ ಪರಿಣಾಮಗಳನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯ ಬಾಬುರಾವ ಕಾಡ್ಲೂರ, ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪೃಥ್ವಿಕ್​ ಶಂಕರ್​, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರಿದ್ದರು. ಮಕ್ಕಳ ಸಾಂಸತಿಕ ಕಾರ್ಯಕ್ರಮ, ವಿವಿಧ ಇಲಾಖೆ ಸ್ತಬ್ಧಚಿತ್ರಗಳು ಗಮನ ಸೆಳೆದವು. ನೂತನ ಗ್ರಾಮಾನುಭವ ಕಾರ್ಯಕ್ರಮಕ್ಕೂ ಸಚಿವರು ಚಾಲನೆ ನೀಡಿದರು.

ಕನ್ನಡದಲ್ಲಿ ಕವಾಯತು ನಿರೂಪಣೆ

ಜಿಲ್ಲಾ ಪೊಲೀಸ್​ ಇಲಾಖೆಯಿಂದ ನಡೆದ ಕವಾಯತು ವೇಳೆ ಅದರ ಮುಖ್ಯಸ್ಥರು (ಪೊಲೀಸ್​ ಅಧಿಕಾರಿ) ಇಡೀ ಕ್ರೀಡಾಂಗಣಕ್ಕೆ ಕೇಳಿಸುವಂತೆ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದರು. ಇದರಿಂದ ಏನೇನು ಹೇಳುವ ಮೂಲಕ ಪೊಲೀಸ್​ ನಿಯಮ ಪಾಲಿಸುತ್ತಾರೆ ಎಂಬ ಬಗ್ಗೆ ಅಲ್ಲಿ ನೆರೆದಿದ್ದವರಿಗೆ ಸುಲಭವಾಗಿ ಅರ್ಥವಾಯಿತು.

ನೀರಿನ ಲಭ್ಯತೆ ಆಧರಿಸಿ ಕಾಲುವೆಗೆ ನೀರು

ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ನೀರನ ಲಭ್ಯತೆ ಆಧರಿಸಿ ಕಾಲುವೆಗೆ ನೀರು ಬಿಡಬೇಕಾಗುತ್ತದೆ. ನೀರಾವರಿ ಸಲಹಾ ಸಮಿತಿ ರ್ನಿಣಯವೇ ಅಂತಿಮವಾಗಿರುತ್ತದೆ. ರೈತರನ್ನು ತೊಂದರೆಗೆ ಸಿಲುಕಿಸಲು ಯಾರೂ ಬಯಸುವುದಿಲ್ಲ. ಆದರೆ ಜಲಾಶಯದಲ್ಲಿನ ನೀರಿನ ಪ್ರಮಾಣದ ಬಗ್ಗೆ ಸರಿಯಾಗಿ ತಿಳಿಯದೆ ಹರಿಸುವಂತೆ ಹೋರಾಟಕ್ಕೆ ಇಳಿಯುವುದು ಸರಿಯಲ್ಲ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು. ನ.12ರಿಂದ 30ರವರೆಗೆ ನೀರು ಹರಿಸದಿದ್ದರೆ ಯಾದಗಿರಿ ಜಿಲ್ಲೆ ಬಂದ್​ ಮಾಡುವುದಾಗಿ ಮಾಜಿ ಸಚಿವ ನರಸಿಂಹ ನಾಯಕ ಹೇಳಿರುವುದನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಜುಗೌಡ ಸಹ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಇದೆ ಎಂದು ಭಾವಿಸಿರುವೆ. ಆದರೆ ಈಗ ಅವರು ಕೆಲಸವಿಲ್ಲದ್ದಕ್ಕೆ ಹೋರಾಟ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಐಸಿಸಿ ಸಭೆಯಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ ಹಾಗೂ ರಾಜಾ ವೇಣುಗೋಪಾಲ ನಾಯಕ ಸೇರಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ಸರಿಯಾಗಿ ವಿಷಯ ಮಂಡಿಸಲು ಬರುವುದಿಲ್ಲ ಎಂಬ ರಾಜುಗೌಡ ಆರೋಪದಲ್ಲಿ ಹುರುಳಿಲ್ಲ. ನಾನು ಸ್ವತ@ ಸಭೆಯಲ್ಲಿ ಭಾಗವಹಿಸಿದ್ದೆ. ಮಾರ್ಚ್​ನಿಂದ ಜೂನ್​ವರೆಗೆ ಮಳೆ ಬಾರದಿದ್ದರೆ ಜನರಿಗೆ ನೀರು ಎಲ್ಲಿಂದ ಒದಗಿಸಬೇಕು ಎಂಬುದನ್ನು ಸರ್ಕಾರ ಗಮನಿಸಬೇಕಾಗಿದೆ. ನಾವು ಆಡಳಿತ ನಡೆಸುತ್ತಿರುವುದರಿಂದ ಜನರ ಹಿತಾಸಕ್ತಿ ಕಾಪಾಡುವುದು ನಮ್ಮ ಜವಾಬ್ದಾರಿ. ಇನ್ನು ಮಾಜಿ ಸಚಿವ ರಾಜುಗೌಡ ಅವರು ಯಾದಗಿರಿ ಜಿಲ್ಲೆ ಬಂದ್​ ಮಾಡುವ ಹೇಳಿಕೆಗೆ ಕಮೆಂಟ್​ ಮಾಡುವುದಿಲ್ಲ ಎಂದರು.

ರಾಜ್ಯ ಸರ್ಕಾರ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಂವಿಧಾನದ 371(ಜೆ) ಅನ್ವಯ ವಿಶೇಷ ಸ್ಥಾನಮಾನ ನೀಡಿ ಈವರೆಗೆ ಲಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಪ್ರತಿ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್​, ಕ್ಯಾನ್ಸರ್​ ಆಸ್ಪತ್ರೆ ಮತ್ತು ವೈದ್ಯಕಿಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರದಲ್ಲಿಯೇ ರಾಜ್ಯದ ವೈದ್ಯಕಿಯ ವ್ಯವಸ್ಥೆ ಮುಂಚೂಣಿಯಲ್ಲಿದೆ.
> ಡಾ.ಶರಣಪ್ರಕಾಶ ಪಾಟೀಲ್​ ಜಿಲ್ಲಾ ಉಸ್ತುವಾರಿ ಸಚಿವ