ಕಂದಕೂರ ಮಾದರಿ ಜನನಾಯಕ

ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ ನಿಮಿತ್ತ ಯಾದಗಿರಿಯಲ್ಲಿ ಜಿಲ್ಲಾ ಜೆಡಿಎಸ್​ ಐಟಿ ಟಕ ಹಾಗೂ ಅಭಿಮಾನಿಗಳಿಂದ ಅನ್ನ ದಾಸೋಹ ನಡೆಯಿತು. ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಜಿಲ್ಲಾ ಮಾಧ್ಯಮ ವಕ್ತಾರ ಮಲ್ಲಣಗೌಡ ಹಳಿಮನಿ ಕೌಳೂರು ಇತರರಿದ್ದರು.
ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ ನಿಮಿತ್ತ ಯಾದಗಿರಿಯಲ್ಲಿ ಜಿಲ್ಲಾ ಜೆಡಿಎಸ್​ ಐಟಿ ಟಕ ಹಾಗೂ ಅಭಿಮಾನಿಗಳಿಂದ ಅನ್ನ ದಾಸೋಹ ನಡೆಯಿತು. ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಷಚಂದ್ರ ಕಟಕಟಿ, ಜಿಲ್ಲಾ ಮಾಧ್ಯಮ ವಕ್ತಾರ ಮಲ್ಲಣಗೌಡ ಹಳಿಮನಿ ಕೌಳೂರು ಇತರರಿದ್ದರು.
Published on: 

ಯಾದಗಿರಿ: ಶಾಸಕ ಶರಣಗೌಡ ಕಂದಕೂರ ಜನ್ಮದಿನ ನಿಮಿತ್ತ ಮಂಗಳವಾರ ಇಲ್ಲಿನ ಜಿಲ್ಲಾ ಕೇಂದ್ರ ಬಸ್​ ನಿಲ್ದಾಣದ ಎದುರು ಜಿಲ್ಲಾ ಜೆಡಿಎಸ್​ ಐಟಿ ಘಟಕ ಹಾಗೂ ಅಭಿಮಾನಿಗಳಿಂದ ಕೇಕ್​ ಸೇವೆ ಹಾಗೂ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

ಈ ವೇಳೆ ಮಾತನಾಡಿದ ಜೆಡಿಎಸ್​ ಜಿಲ್ಲಾಧ್ಯಕ್ಷ ಸುಭಾಶಚಂದ್ರ ಕಟಕಟಿ, ಶಾಸಕ ಕಂದಕೂರ ಅವರು ಕೇವಲ ರಾಜಕಾರಣಿಯಾಗಿರದೆ ಕ್ಷೇತ್ರದ ಪ್ರತಿ ಹಳ್ಳಿ, ಪ್ರತಿ ಮನೆಗೂ ಅಭಿವೃದ್ಧಿಯ ಬೆಳಕು ಚೆಲ್ಲುತ್ತಿರುವ ಮಾದರಿ ಜನನಾಯಕರಾಗಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್​ ಮಾಧ್ಯಮ ವಕ್ತಾರ ಮಲ್ಲಣಗೌಡ ಹಳಿಮನಿ ಕೌಳೂರು ಮಾತನಾಡಿ, ಜನರ ಧ್ವನಿಯಾಗಿ ಸದನದಲ್ಲಿ ಹೋರಾಟ ಮಾಡುತ್ತಾ ಕ್ಷೇತ್ರದ ರೈತರ ಕಷ್ಟಗಳಿಗೆ ಸ್ಪಂದಿಸಿ, ಪ್ರಾದೇಶಿಕ ಅಸಮತೋಲನದ ವಿರುದ್ಧ ಧ್ವನಿ ಎತ್ತುವ ಮೂಲಕ ಶಾಸಕ ಶರಣಗೌಡ ಕಂದಕೂರ ಅವರು ರಾಜ್ಯಮಟ್ಟದಲ್ಲಿ ಗಮನ ಸೆಳೆದ ಯುವ ನಾಯಕರಾಗಿದ್ದಾರೆ ಎಂದರು.

ಜನ್ಮದಿನ ನಿಮಿತ್ತ ಹಲವೆಡೆ ಅನ್ನದಾಸೋಹ, ದೇವಸ್ಥಾನಗಳಲ್ಲಿ ಪೂಜೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳ ವಿತರಣೆ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರಾದ ರಾಜು ಉಡುಪಿ, ಲ್ಮಣ್​ ನಾಯಕ್​ ಕೂಡ್ಲೂರು, ಅಲ್ಲಾವುದ್ಧೀನ್​ ನೀಲಹಳ್ಳಿ, ಯಲ್ಲಾಲಿಂಗ ಚಾಮನಳ್ಳಿ, ಶಿವು ಗೌಡ ಸೈದಾಪುರ, ಷಣ್ಮುಖ ಎಸ್​.ಬಡಿಗೇರ್​, ಶಿವು ಯಂಪಾಡ್​, ಪವನ್​, ಸಿದ್ದಲಿಂಗರೆಡ್ಡಿ ಗೌಡ, ಬಂದುಗೌಡ ಭೀಮನಳ್ಳಿ, ಭೀಮು ಗೋಪಾಳಪುರ, ಸಾಗರ್​ ಹುಲ್ಲೆರ್​, ಬಸ್ಸು, ಮಾಡಿವಾಳ, ಸುರೇಶ, ತಾಯಪ್ಪ ನಾಗಲಪುರ, ಸಾಬು ನಾಯಕ, ಭೀಮು ಶಾಸಿ, ತೈಸಿನ್​, ರಾಮಚಂದ್ರ, ಬಸ್ಸು ಸೈದಾಪುರ ನಾಗರೆಡ್ಡಿ. ರಾಜು ಕೂಡ್ಲೂರು, ಪರಶುರಾಮ, ವಿಜಯ್​, ರಾಜುಸಾಲಿ, ಮಲ್ಲಿಕಾರ್ಜುನ ಅಯ್ಯಾಳ, ಭೀಮು ರಾಂಪೂರ, ಅಶೋಕ ತೇಜ್​ ಇತರರಿದ್ದರು.