

ಯಾದಗಿರಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಆಯೋಜಿಸಿದ್ದ 500 ಅಡಿ ಉದ್ದದ ಕನ್ನಡ ಬಾವುಟದ ಅದ್ದೂರಿ ಮೆರವಣಿಗೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಸರ್ಕಾರಿ ಪದವಿ ಕಾಲೇಜು, ಆರ್ಟಿಒ ಕಚೇರಿ, ಡಾನ್ ಬಾಸ್ಕೊ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣವರೆಗೆ ನಡೆಯಿತು. ಶಾಲಾ&ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಭಾಗಿಯಾಗಿ ಭವ್ಯ ಮೆರವಣಿಗೆಗೆ ಸಾಯಾದರು. ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ.ಜಲ್ಲಪ್ಪನೋರ್ ರಾಮಸಮುದ್ರ ನೇತೃತ್ವದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಡಿಸಿ ರಾಹುಲ್ ಪಾಂಡ್ವೆ, ಎಸ್ಪಿ ಪೃಥ್ವಿಕ್ ಶಂಕರ್, ಡಿಡಿಪಿಐ ಚನ್ನಬಸಪ್ಪ ಮುಧೋಳ, ಪ್ರಮುಖರಾದ ದೇವೇಂದ್ರನಾಥ ನಾದ, ಲಲಿತಾ ಅನಪುರ, ನಾಗರತ್ನ ಕುಪ್ಪಿ, ಮಲ್ಲಣ್ಣಗೌಡ ಹಳಿಮನಿ ಕೌಳೂರು, ಮರೆಪ್ಪ ನಾಯಕ ಮೊಗದಂಪುರ, ಸಿದ್ದಲಿಂಗರಡ್ಡಿ ಉಳ್ಳೆಸುಗೂರು, ಹಣಮಂತ ಇಟಗಿ, ಶ್ರೀಧರ ಸಾಹುಕಾರ, ಶಿವರಾಜ ದಾಸನಕೇರಿ, ಸುನಿತಾ ಚವ್ಹಾಣ್, ಕಾಶಪ್ಪ ಹೆಗ್ಗಣಗೇರಾ, ಸಾಬು ಹೋರುಂಚಾ, ಸೈದಪ್ಪ ಕೂಲುರಕರ್, ಅಶೋಕ ಐಕೂರ, ಶರಣಗೌಡ ಅಲ್ಲಿಪುರ, ಬೀರೇಶ ಚಿರತೆನೋರ, ಗಿರೀಶಕುಮಾರ ಯಡ್ಡಳ್ಳಿ, ರುದ್ರಾಂಬಿಕಾ ಆರ್.ಪಾಟೀಲ್, ಬಸ್ಸುಗೌಡ ಚಟ್ನಳ್ಳಿ, ಮಂಜುನಾಥ ಬಾಚವಾರ ಇತರರಿದ್ದರು. ಇದಕ್ಕೂ ಮುನ್ನ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್ ಪೂಜೆ ಸಲ್ಲಿಸಿದರು.