ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ

ಈಶಾನ್ಯ ಶಿಕ್ಷಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್​ ನಮೋಶಿ ಅವರ ಸಾಧನೆ ಮತ್ತು ಮುಂದಿನ ಕೆಲಸಗಳ ಪ್ರಣಾಳಿಕೆಯನ್ನು ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​ ಯಾದಗಿರಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಅಮೀನರಡ್ಡಿ ಯಾಳಗಿ, ಲಲಿತಾ ಅನಪುರ, ರಾಚಣ್ಣಗೌಡ ಮುದ್ನಾಳ್​, ಮಹೇಶರಡ್ಡಿ ಮುದ್ನಾಳ್​ ಇತರರಿದ್ದರು.
ಈಶಾನ್ಯ ಶಿಕ್ಷಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್​ ನಮೋಶಿ ಅವರ ಸಾಧನೆ ಮತ್ತು ಮುಂದಿನ ಕೆಲಸಗಳ ಪ್ರಣಾಳಿಕೆಯನ್ನು ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​ ಯಾದಗಿರಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಅಮೀನರಡ್ಡಿ ಯಾಳಗಿ, ಲಲಿತಾ ಅನಪುರ, ರಾಚಣ್ಣಗೌಡ ಮುದ್ನಾಳ್​, ಮಹೇಶರಡ್ಡಿ ಮುದ್ನಾಳ್​ ಇತರರಿದ್ದರು.
Published on: 

ಯಾದಗಿರಿ: ಎರಡೂವರೆ ದಶಕಗಳಿಂದ ಶಿಕ್ಷಕರು ಮತ್ತು ಪದವಿಧರರ ಸಮಸ್ಯೆಗಳಿಗೆ ಸ್ಪಂದಿಸಲು ವಿಧಾನಸೌಧದ ಒಳಗೂ ಮತ್ತು ಹೊರಗೂ ಸತತ ಹೋರಾಟ ಮಾಡುತ್ತ ಬಂದಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್​ ನಮೋಶಿ ಅವರನ್ನು ಮೊದಲ ಪ್ರಾಶಸದ ಮತಗಳಿಂದ ಗೆಲ್ಲಿಸುವಂತೆ ವಿಧಾನ ಪರಿಷತ್​ ಮಾಜಿ ಸದಸ್ಯ ಅಮರನಾಥ ಪಾಟೀಲ್​ ಮನವಿ ಮಾಡಿದರು.

ಕಾಂಗ್ರೆಸ್​ ಸರ್ಕಾರ ಶಿಕ್ಷಕರ ನೇಮಕ ಸೇರಿ ಅನೇಕ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ವಿಶೇಷವಾಗಿ ಗಿರಿ ಜಿಲ್ಲೆಯಲ್ಲಿ ಫಲಿತಾಂಶ ಕೊನೆಯ ಸ್ಥಾನದಿಂದ ಮೇಲೆರಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಗಾಗಲೇ ನಾಲ್ಕು ಸಲ ಮೇಲ್ಮನೆಗೆ ಆಯ್ಕೆಯಾಗಿರುವ ನಮೋಶಿ 1991ರಿಂದ 1995ರವರೆಗೆ ಕಲಬುರಗಿ ವಿಭಾಗದ ಹಲವಾರು ಶಾಲಾ&ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದ್ದಾರೆ. 2010&11ರಲ್ಲಿ ಕುಮಾರ ನಾಯಕ ವರದಿ ಶಿಫಾರಸು ಅನ್ವಯ ಪ್ರೌಢಶಾಲಾ ಶಿಕರು ಹಾಗೂ ಪದವಿಪೂರ್ವ ಉಪನ್ಯಾಸಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜೆಒಸಿ ಅಡಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರು ಮತ್ತು ಸಿಬ್ಬಂದಿ ಸೇವೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಶಿಕರ ಸೇವೆ ಕಾಯಂಗೊಳಿಸುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಶಿಕರ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀೆ ಮೂಲಕವೇ ನಡೆಸಬೇಕು ಎಂಬ ಪ್ರಮುಖ ಬೇಡಿಕೆಗಾಗಿ ಪದವೀಧರರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಮೋಶಿ ಅವರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಡ್ತಿ ಹೊಂದಿದ ಶಿಕರಿಗೆ 6ನೇ ವೇತನ ಆಯೋಗದ 2ನೇ ಸಂಪುಟದ ಶಿಫಾರಸಿನಂತೆ 10, 15, 20 ಮತ್ತು 25 ವರ್ಷಗಳ ವೇತನ ಬಡ್ತಿ ಜಾರಿಗೊಳಿಸದಿರುವ ವಿಷಯವನ್ನು ಸದನದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಸಮಗ್ರ ಪರಿಶೀಲನೆಗಾಗಿ ವಿಶೇಷ ಸದನ ಸಮಿತಿ ರಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅಭ್ಯರ್ಥಿಯ ಇದುವರೆಗಿನ ಕೆಲಸ&ಕಾರ್ಯಗಳ ಪಟ್ಟಿಯನ್ನೇ ಬಿಚ್ಚಿಟ್ಟ ಅಮರನಾಥ ಪಾಟೀಲ್​, ಅ.23ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಥಮ ಪ್ರಾಶಸದ ಮತ ನೀಡಿ ಗೆಲ್ಲಿಸಬೇಕೆಂದು ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮುಖಂಡರಾದ ಲಲಿತಾ ಅನಪುರ, ರಾಚಣ್ಣಗೌಡ ಮುದ್ನಾಳ್​, ದೇವೇಂದ್ರನಾಥ ನಾದ, ಅಮೀನರಡ್ಡಿ ಯಾಳಗಿ, ಮಹೇಶರಡ್ಡಿ ಮುದ್ನಾಳ್​, ಹಣಮಂತ ಇಟಗಿ, ಲಕ್ಷಿ$್ಮಪುತ್ರ ಮಾಲಿಪಾಟೀಲ್​, ತಿರುಪತಿರೆಡ್ಡಿ ಇತರರಿದ್ದರು.

ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಪರ ಹೋರಾಟ

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಪಾರದರ್ಶಕ, ಶಿಕಸ್ನೇಹಿ ಹಾಗೂ ನ್ಯಾಯಸಮ್ಮತ ವರ್ಗಾವಣೆ ನೀತಿ ಜಾರಿಗೊಳಿಸುವಲ್ಲಿ ಅವಿರತ ಶ್ರಮ ವಹಿಸಿದ್ದ ನಮೋಶಿ, ಸಂವಿಧಾನದ ಅನುಚ್ಛೇದ 371(ಜೆ)ರ ಆಶಯದಂತೆ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿಯಲ್ಲಿ ಉಂಟಾಗುತ್ತಿರುವ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ನಿರಂತರ ಧ್ವನಿ ಎತ್ತಿ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು 11ರಿಂದ 32 ಸಾವಿರಕ್ಕೆ ಹೆಚ್ಚಿಸುವ ಪ್ರಮುಖ ಸಾಧನೆ ಬಿಜೆಪಿ ಸರ್ಕಾರದಲ್ಲಿ ಆಗಿದ್ದು, ಆಗ ನಮೋಶಿ ಸರ್ಕಾರದ ಗಮನಕ್ಕೆ ಈ ವಿಷಯ ತರಲು ಹೆಚ್ಚು ಶ್ರಮ ಹಾಕಿದ್ದಾರೆ ಎಂದು ಅಮರನಾಥ ಪಾಟೀಲ್​ ಹೇಳಿದರು.

ಅನೇಕ ಸಮಸ್ಯೆಗಳಿಗೂ ಧ್ವನಿ

2020ರಿಂದ ಹಲವಾರು ಪ್ರೌಢಶಾಲಾ ಶಿಕರನ್ನು ಮುಖ್ಯಗುರು ಹುದ್ದೆಗೆ ಬಡ್ತಿ ಕೊಡಿಸುವಲ್ಲಿ ಯಶಸ್ವಿಯಾಗಿರುವ ಶಶೀಲ್​ ನಮೋಶಿ ಅವರು, ಪ್ರಸಕ್ತ ವರ್ಷ 159 ಹುದ್ದೆಗಳಿಗೆ ಡಿಪಿಸಿ ಕಾರ್ಯ ಮುಗಿದಿದ್ದು, ಶ್ರೀವೇ ಕೌನ್ಸೆಲಿಂಗ್​ ಮೂಲಕ ಆದೇಶ ನೀಡಲಾಗುತ್ತದೆ. 2011ರಿಂದ ನೆನೆಗುದಿಗೆ ಬಿದ್ದಿದ್ದ ಪ್ರೌಢಶಾಲಾ ಶಿಕರ ಪದೋನ್ನತಿ ಮೂಲಕ ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ನೇಮಕಗೊಳಿಸುವ ಪ್ರಕ್ರಿಯೆಗೆ ನಿರಂತರ ಒತ್ತಾಯ, ಹೋರಾಟದ ಫಲವಾಗಿ ಚಾಲನೆ ದೊರೆತಿದೆ ಎಂದು ಅಮರನಾಥ ಪಾಟೀಲ್​ ಹೇಳಿದರು. ಕನ್ನಡ ಮಾಧ್ಯಮ ಶಾಲೆಗಳ ಉಳಿವು ಮತ್ತು ಬಲವರ್ಧನೆಗಾಗಿ ಅನುದಾನಕ್ಕೆ ಒಳಪಡಿಸಿ ಅಗತ್ಯ ಸರ್ಕಾರಿ ಅನುದಾನ ದೊರಕಿಸಿಕೊಡಲು ನಿರಂತರ ಹೋರಾಟ ನಡೆಸಿರುವುದು ಅವರ ಕಾಳಜಿಯನ್ನು ತೋರಿಸಿಕೊಡುತ್ತದೆ ಎಂದರು. ಪ್ರಮುಖವಾಗಿ ಎನ್​ಪಿಎಸ್​ ರದ್ದುಗೊಳಿಸಿ ಒಪಿಎಸ್​ ಜಾರಿ ಸೇರಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ&ಕಾಲೇಜುಗಳ ಅನೇಕ ಸಮಸ್ಯೆಗಳು ಪರಿಹಾರ ಕಾಣಬೇಕಾಗಿವೆ. ಶಿಕರ ಗೌರವ, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶಿಣ ವ್ಯವಸ್ಥೆ ಬಲವರ್ಧನೆಗಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಶಶೀಲ್​ ನಮೋಶಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net