ಬರಗಾಲದಿಂದಾಗಿ ಗಿರಿನಾಡ ಉತ್ಸವ ರದ್ದು

ಯಾದಗಿರಿಯಲ್ಲಿ ಗುರುವಾರ ಕರವೇ ಹಮ್ಮಿಕೊಂಡ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯನ್ನು ಜಿಲ್ಲಾಧ್ಯಕ್ಷ ಟಿ.ಎನ್​.ಭೀಮುನಾಯಕ ಉದ್ಘಾಟಿಸಿದರು. ಸಿದ್ದು ನಾಯಕ ಹತ್ತಿಕುಣಿ, ಮಲ್ಲು ಮಾಳಿಕೇರಿ, ನಿಂಗಪ್ಪ ಗುಡುಗುಡಿ, ಶರಣಪ್ಪ ದಳಪತಿ, ಚೌಡಯ್ಯ ಬಾವೂರ, ವಿಶ್ವರಾಜ ಹೊನಗೇರಾ ಇತರರಿದ್ದರು.
ಯಾದಗಿರಿಯಲ್ಲಿ ಗುರುವಾರ ಕರವೇ ಹಮ್ಮಿಕೊಂಡ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಭೆಯನ್ನು ಜಿಲ್ಲಾಧ್ಯಕ್ಷ ಟಿ.ಎನ್​.ಭೀಮುನಾಯಕ ಉದ್ಘಾಟಿಸಿದರು. ಸಿದ್ದು ನಾಯಕ ಹತ್ತಿಕುಣಿ, ಮಲ್ಲು ಮಾಳಿಕೇರಿ, ನಿಂಗಪ್ಪ ಗುಡುಗುಡಿ, ಶರಣಪ್ಪ ದಳಪತಿ, ಚೌಡಯ್ಯ ಬಾವೂರ, ವಿಶ್ವರಾಜ ಹೊನಗೇರಾ ಇತರರಿದ್ದರು.
Published on: 

ಯಾದಗಿರಿ: ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದರಿಂದ ರಾಜ್ಯೋತ್ಸವ ನಿಮಿತ್ತ ಕರವೇ ಹಮ್ಮಿಕೊಳ್ಳುವ ಗಿರಿನಾಡ ಉತ್ಸವ ಆಚರಣೆ ಮಾಡುವುದನ್ನು ಕೈಬಿಟ್ಟು, ರೈತರಿಗೆ ಪರಿಹಾರ ಕೊಡಿಸುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್​.ಭೀಮು ನಾಯಕ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರಗಾಲದಲ್ಲಿ ಸಂಕಷ್ಟಕ್ಕೀಡಾದ ರೈತರ ಜತೆ ನಾವಿದ್ದೇವೆ ಎನ್ನುವ ಆತ್ಮವಿಶ್ವಾಸವನ್ನು ಪ್ರತಿಯೊಬ್ಬ ಕರವೇ ಕಾರ್ಯಕರ್ತರು ರೈತರ ಜತೆ ನಿಲ್ಲಬೇಕಿದೆ. ಅದರ ಜತೆಗೆ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಹೋರಾಟ ರೂಪಿಸಬೇಕಿದ್ದು, ನಮ್ಮ ಕಾರ್ಯಕರ್ತರು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸಭೆಯಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ರಾಜ್ಯೋತ್ಸವ ಆಚರಣೆ ಕುರಿತು ಚರ್ಚಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಲವು ಹಳ್ಳಿಗಳಲ್ಲಿ ಯುವಕರನ್ನು ಕರವೇ ಸಂಟನೆಗೆ ಸೇರಿಸುವಲ್ಲಿ ಹಾಗೂ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯುವಕರ ಮನವೊಲಿಸುವಲ್ಲಿ ಪ್ರತಿಯೊಬ್ಬ ಗ್ರಾಮ ಟಕದ ಅಧ್ಯಕ್ಷರು ಕ್ರಮಕೈಗೊಳ್ಳುವಂತೆ ರ್ನಿಣಯಿಸಲಾಯಿತು.

ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ಸ್ವಾಗತಿಸಿದರು. ಈ ವೇಳೆ ನೂತನ ಪದಾದಿಕಾರಿಗಳನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಕರವೇ ಪದಾಧಿಕಾರಿಗಳಾದ ನಿಂಗಪ್ಪ ಗುಡುಗುಡಿ, ಶರಣಪ್ಪ ದಳಪತಿ, ಚೌಡಯ್ಯ ಬಾವೂರ, ವಿಶ್ವರಾಜ ಹೊನಗೇರಾ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್​ ಚಿಗಾನೂರ, ಬಸವರಾಜ ಚೆನ್ನೂರ, ಅಂಬ್ರೀಶ ಕಟ್ಟಿಮನಿ, ಮೌನೇಶ ಮಾಧ್ವಾರ, ಸಿದ್ದಪ್ಪ ಕೂಯಿಲೂರು, ಭೀಮರಾಯ ರಾಮಸಮುದ್ರ, ಹಣಮಂತ ತೇಕರಾಳ, ಅಶೋಕ ನಾಯಕ, ಶರಣು ತಿಂಥಣಿ, ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ವಿಜಯ ರಾಠೋಡ, ಅನೀಲ ದಾಸನಕೇರಿ, ಲಕ್ಷ$್ಮಣ ಕೂಡ್ಲೂರು, ಸಾಬು ನೀಲಹಳ್ಳಿ, ನಾಗರಡ್ಡಿ ಕೂಡ್ಲೂರು ಇತರರಿದ್ದರು.