

ಶಹಾಪುರ: ಕಾಯಕ ಸಮುದಾಯಗಳು ಸೇರಿ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಹಿಂದುಳಿದ ವರ್ಗಗಳ ಸಬಲೀಕರಣವೇ ಬಿಜೆಪಿ ಗುರಿ ಎಂದು ವಿಧಾನ ಪರಿಷತ್ ಸದಸ್ಯರಾದ ಪಕ್ಷದ ಒಬಿಸಿ ಮೋರ್ಚಾ ರಾಜ್ಯಾಧ್ಯ ಆರ್. ರು ಕೌಟಿಲ್ಯ ಹೇಳಿದರು.
ಪಕ್ಷದ ಸ್ಥಳಿಯ ಕಚೇರಿಯಲ್ಲಿ ಭಾನುವಾರ ಕರೆದಿದ್ದ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಮಟ್ಟದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣ ಸಮುದಾಯಗಳನ್ನು ಸಂಟಿಸಿ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಬೊಕ್ಕಸ ಖಾಲಿಯಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಿಗಮ&ಮಂಡಳಿಗಳಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದುಳಿದ ಹಾಗೂ ಕಾಯಕ ಸಮುದಾಯಗಳಿಗಾಗಿ ನಿಗಮ&ಮಂಡಳಿ ರಚಿಸಿ ಅನುದಾನ ಒದಗಿಸಿದ್ದರು. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹಲವು ನಿಗಮ ಸ್ಥಾಪಿಸಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿತ್ತು. ಆದರೆ ಈಗಿನ ಸರ್ಕಾರ ಕಾಂತರಾಜ್ ವರದಿ ಜಾರಿಗೆ ತರದೆ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸಣ್ಣ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸಲು ಬಿಜೆಪಿ ಆದ್ಯತೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುದ್ರಾ, ಕೌಶಲಾಭಿವೃದ್ಧಿ ಸೇರಿ ವಿವಿಧ ಯೋಜನೆಗಳ ಮೂಲಕ ಯುವ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ಅಗತ್ಯವಾಗಿದೆ ಎಂದರು.
ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, 2028ರ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ನಾಲ್ಕೂ ೇತ್ರಗಳಲ್ಲಿ ಪದ ಸಂಟನೆ ಬಲಪಡಿಸಬೇಕು. ಸಣ್ಣ ಸಮುದಾಯಗಳು ಒಗ್ಗೂಡಿ ರಾಜಕೀಯವಾಗಿ ತಮ್ಮ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖಂಡರಾದ ಅಮೀನರಡ್ಡಿ ಯಾಳಗಿ, ಚಂದ್ರಶೇಖರ ಮಾಗನೂರ, ರಾಚನಗೌಡ ಮುದ್ನಾಳ್ ಮಾತನಾಡಿದರು. ಒಬಿಸಿ ಮೋರ್ಚಾ ಜಿಲ್ಲಾಧ್ಯ ಮಲ್ಲಿಕಾರ್ಜುನ ಕಂದಕೂರ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಸಿದ್ದಣ್ಣಗೌಡ ಕಾಡಂನೂರ, ರಾಜಶೇಖರ ಗೂಗಲ್, ಅಡಿವೆಪ್ಪ ಜಾಕಾ, ಮಂಡಲ ಅಧ್ಯ ತಿರುಪತಿ ಹತ್ತಿಕಟಿಗಿ, ನಗರ ಅಧ್ಯ ಚಂದ್ರಶೇಖರ ಯಾಳಗಿ ಇತರರಿದ್ದರು.
ಬಸವಣ್ಣನ ನಾಡು ಬೀದರ್ನಿಂದ ಕಾಯಕ ಸಮುದಾಯಗಳ ಸಂಟನೆಗೆ ಹೊಸ ಕ್ರಾಂತಿ ಶುರುವಾಗಿದೆ. ಅಕ್ಕಸಾಲಿಗ, ನೇಕಾರ, ಸಿಂಪಿಗೆ, ಮಡಿವಾಳ, ಸವಿತಾ, ಕಬ್ಬಲಿಗ ಸೇರಿ ಅನೇಕ ಸಣ್ಣ ಸಮುದಾಯಗಳು ಇಂದಿಗೂ ಭೂಮಿ, ನಿವೇಶನ ಮತ್ತು ಸಮರ್ಪಕ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಇಂತಹ ಸಮುದಾಯಗಳ ಹಕ್ಕುಗಳಿಗಾಗಿ ಸಂಟಿತವಾಗಿ ಧ್ವನಿ ಎತ್ತಬೇಕಿದೆ. ನಾನು ಎಲ್ಲ ಸಮುದಾಯದ ನೊಂದವರ ಧ್ವನಿಯಾಗುವ ನಿಟ್ಟಿನಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದೆ ಎಂದು ಆರ್. ರು ಕೌಟಿಲ್ಯ ಹೇಳಿದರು.