ಕೆಪಿಎಸ್ಸಿ ಪರೀಕ್ಷೆಗೆ ೭೭೪ ಹಾಜರು

05ydg05
ಯಾದಗಿರಿ ಕೇಂದ್ರವೊAದರಲ್ಲಿ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗೆ ಪೊಲೀಸ್ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿರುವುದು.
Published on

ಯಾದಗಿರಿ: ಕೆಪಿಎಸ್‌ಸಿಯಿಂದ ಭಾನುವಾರ ರಾಜ್ಯಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಜಿಲ್ಲಾಡಳಿತ ಪೊಲೀಸ್ ಭದ್ರತೆಯೊಂದಿಗೆ ಪರೀಕ್ಷೆ ನಡೆಸಿತು.

ಬೆಳಗ್ಗೆ ೯ಕ್ಕೆ ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣ ವಿಷಯದ ಪರೀಕ್ಷೆ ನಡೆದವು. ೧೬೩೮ ನೋಂದಾಯಿತರ ಪೈಕಿ ೭೭೪ ಅಭ್ಯರ್ಥಿಗಳು ಪರೀಕ್ಷೆ ಬರೆದರೆ, ೮೬೪ ಜನ ಗೈರಾಗಿದ್ದರು.

೫ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಸುತ್ತಲಿನ ೩೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net