

ಕೊಪ್ಪಳ: ಪಿಎಸ್ಐ ಪರಶುರಾಮ ಸಾವಿನ ಪ್ರಕರಣದಲ್ಲಿ ಶಾಸಕ ಹಾಗೂ ಅವರ ಪುತ್ರನ ಪಾತ್ರವಿದೆ. ಸರ್ಕಾರ ಸ್ವಜನಪಕ್ಷಪಾತ ಮಾಡದೇ ತನಿಖೆ ನಡೆಸಬೇಕೆಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ವಿವಿಧ ಸಂಟನೆಗಳ ಮುಖಂಡರು ನಡೆಸಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್, ಅವರ ಪುತ್ರ ಪಂಪಾರಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒತ್ತಡಕ್ಕೆ ಒಳಗಾದ ಪರಶುರಾಮ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಪ್ರತಿಭಾವಂತನಾಗಿದ್ದ ಪರಶುರಾಮ 8 ಸರ್ಕಾರಿ ನೌಕರಿ ಪಡೆದಿದ್ದರು. ಕೆಳ ವರ್ಗದವರೆಂಬ ಕಾರಣಕ್ಕೆ ಹಿಯಾಳಿಸಿದ್ದು ಸರಿಯಲ್ಲ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಸಕ ಚನ್ನಾರೆಡ್ಡಿ, ಅವರ ಪುತ್ರ ಕಾಂಗ್ರೆಸ್ನವರು ಎಂಬ ಕಾರಣಕ್ಕೆ ಪಕ್ಷಪಾತ ತೋರಬಾರದು. ಹಾಗೆ ಮಾಡಿದರೆ ನಘೋರ ಅಪರಾಧವಾಗಲಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪರಶುರಾಮ ಕುಟುಂಬಕ್ಕೆ ಉದ್ಯೋಗ, ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರಮುಖ ಹೋರಾಟಗಾರರಾದ ಡಿ.ಎಚ್. ಪೂಜಾರ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಎಸ್.ಎ.ಗಫಾರ್, ಕಾಶಪ್ಪ ಚಲವಾದಿ, ಸಂಜಯದಾಸ್ ಕೌಜಗೇರಿ, ನಿಂಗೂ ಎಸ್. ಬೆಣಕಲ್, ಬಸವರಾಜ ನರೇಗಲ್, ರಾಮಲಿಂಗಯ್ಯ ಶಾಸ್ತ್ರಿಮಠ, ಪಾಮಣ್ಣ ಕರಡೋಣಿ, ಭೀಮಪ್ಪ ಯಲಬುರ್ಗಾ ಇತರರಿದ್ದರು.