ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್ ಮಾಡಿ

meeting
Published on

ಯಾದಗಿರಿ: ಜಿಲ್ಲೆಯಲ್ಲಿ 18ರಂದು ದ್ವಿತೀಯ ಪಿಯುಸಿ ಮತ್ತು 25ರಂದು ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸರ್ಕಾರದ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಸಂಬಂಧ ಭಾನುವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗಳು ವಿದ್ಯಾಥರ್ಿಗಳ ಬಾಳಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ಕೋವಿಡ್ ಬಗ್ಗೆ ಯಾವುದೇ ಆತಂಕದ ಛಾಯೆ ಇರಬಾರದು. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿನ ಖುಚರ್ಿ, ಟೇಬಲ್ ಸೇರಿ ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು. ಶೌಚಗೃಹ, ವಿದ್ಯುತ್ ವ್ಯವಸ್ಥೆ ಇರಬೇಕು. ಪರೀಕ್ಷಾಥರ್ಿಗಳಿಗೆ ಮಾಸ್ಕ್ ವಿತರಿಸಬೇಕು ಮತ್ತು ಸುಸೂತ್ರ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಬಳಸುವುದು, ಕೈತೊಳೆದುಕೊಳ್ಳುವುದು ಜೀವನದ ಭಾಗವಾಗಬೇಕು. ಕರೊನಾ ನಿಯಂತ್ರಣದಲ್ಲಿ ಸಕರ್ಾರದ ಪ್ರಯತ್ನದ ಜತೆಗೆ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಇಲ್ಲವಾದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಕರ್ಾರ ಏನೇ ಕ್ರಮ ಕೈಗೊಂಡರೂ ಫಲಿಸದು. ವೈರಸ್ ನಮ್ಮನ್ನು ಬಿಟ್ಟು ತೊಲಗಿಲ್ಲ. ಜನಜೀವನ ಸಹಜತೆಗಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ ಎಂಬುದು ಜನರ ಮನಸ್ಸಿನಲ್ಲಿ ಬಂದಾಗ ಮಾತ್ರ ಕೋವಿಡ್ ಮುಕ್ತ ಜಿಲ್ಲೆ ಆಗಿಸಬಹುದು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಗೃಹ ದಿಗ್ಬಂಧನದಲ್ಲಿರುವ 15,264 ವಲಸಿಗರಿಗೆ ಸಕರ್ಾರದ ಮಾರ್ಗಸೂಚಿ ಪಾಲಿಸಲು ಮತ್ತು ಆರೋಗ್ಯ ಸ್ಥಿತಿ ವಿಚಾರಿಸಲು ಕರೆ ಮಾಡಲಾಗಿದೆ. ಅಲ್ಲದೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್​ ಸಮಿತಿಗಳಿಂದ ನಿಗಾ ವಹಿಸಲಾಗುತ್ತಿದೆ. ಅದೇ ರೀತಿ ನಗರ ಸ್ಥಳೀಯ ಸಂಸ್ಥೆ ಸದಸ್ಯರ ಸಹಾಯ ಪಡೆದು ನಗರ ಪ್ರದೇಶದವರ ಮೇಲೆ ನಿಗಾ ಇರಿಸಲಾಗಿದೆ. ಜಿಲ್ಲಾದ್ಯಂತ ಹೆಲ್ತ್ ವಾಚ್ ಆ್ಯಪ್ ಮೂಲಕ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಶೇ.90.60 ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಗೃಹ ದಿಗ್ಬಂಧನದಲ್ಲಿ ಇರುವವರು ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಮನೆಯಲ್ಲಿ ಇರತಕ್ಕದ್ದು. ಒಂದು ವೇಳೆ ಹೊರಗಡೆ ತಿರುಗಾಡುವುದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಅಂಥವರನ್ನು ಪುನಃ ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಗುವುದು. ಮನೆ ಬಿಟ್ಟು ಹೊರಗಡೆ ತಿರುಗಾಡದೆ ಗೃಹ ದಿಗ್ಬಂಧನ ನಿಯಮ ಪಾಲಿಸುತ್ತಿರುವ ಕಾಮರ್ಿಕರಿಗೆ ಅಜೀಮ್ ಪ್ರೇಮ್ಜಿ ಫೌಂಡೇಷನ್ ಆಹಾರ ಧಾನ್ಯ ಕಿಟ್ ವಿತರಿಸುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶಮರ್ಾ, ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಡಿಸಿ ಪ್ರಕಾಶ್ ಜಿ.ರಜಪೂತ್, ಎಸಿ ಶಂಕರಗೌಡ ಎಸ್.ಸೋಮನಾಳ, ಡಿಎಚ್ಒ ಡಾ.ಎಂ.ಎಸ್. ಪಾಟೀಲ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಿಶೇಷಾಧಿಕಾರಿ ಡಾ.ಶಂಕರಗೌಡ ಐರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net