ಲಾಕ್ಡೌನ್ ಉಲ್ಲಂಘಿಸಿದ 31 ಜನ ಸೆರೆ

DC Press meet
Published on

ಯಾದಗಿರಿ: ಜಿಲ್ಲಾದ್ಯಂತ ಕರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ವಿಸ್ತರಿಸಿದ ಲಾಕ್ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.

ಕರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಿರುವ 16 ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿ ಮಾಡಿ ಅನವಶ್ಯಕವಾಗಿ ಓಡಾಡುತ್ತಿದ್ದ 1,283 ವಾಹನಗಳನ್ನು ಜಪ್ತಿ ಮಾಡಿ 7,71,100 ರೂ. ದಂಡ ವಿಧಿಸಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಕರ್ಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್ಡೌನ್ ಮೇ 3ರವರೆಗೆ ವಿಸ್ತರಿಸಲಾಗಿದೆ. ಇದುವರೆಗೆ ಲಾಕ್ಡೌನ್ ಉಲ್ಲಂಘಿಸಿದ 31 ಜನರನ್ನು ಬಂಧಿಸಲಾಗಿದ್ದು, 43 ಎಫ್ಐಆರ್ ದಾಖಲಾಗಿವೆ. ಪಿ-45 ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾದ 20 ಜನರನ್ನು ಯಾದಗಿರಿ ತಾಲೂಕಿನ ಸೂಪರ್ ಕ್ವಾರಂಟೈನ್ ಸೆಂಟರ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಗಂಟಲಿನ ದ್ರವ ಪರೀಕ್ಷಿಸಲಾಗಿದ್ದು, ನಕಾರಾತ್ಮಕ ಫಲಿತಾಂಶ ಬಂದಿವೆ. ಇನ್ನು ನಿಜಾಮುದ್ದೀನ್ ತಬ್ಲಿಘಿ ಮರ್ಕಜ್ ಮರ್ಕಜ್ನಿಂದ ಹಿಂದಿರುಗಿದ ಜಿಲ್ಲೆಯ 5 ಜನರ ಗಂಟಲಿನ ದ್ರವಗಳನ್ನು 2 ಬಾರಿ ಪರೀಕ್ಷಿಸಲಾಗಿ ನೆಗೆಟಿವ್ ರಿಪೋಟರ್್ ಬಂದಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 5 ಜ್ವರ ತಪಾಸಣಾ ಕೇಂದ್ರಗಳಿದ್ದು, 6 ಆರ್ಆರ್ಟಿ ತಂಡಗಳ ಮೂಲಕ ಇದುವರೆಗೆ 17,170 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಉಸಿರಾಟದ ತೊಂದರೆ ಮತ್ತು ಜ್ವರ ಇರುವವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಕಳಿಸಲಾಗುತ್ತಿದೆ. ಶಂಕಿತರ ಮಾದರಿಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆ, ಸುರಪುರ ಮತ್ತು ಭೀಮರಾಯನ ಗುಡಿಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಿ ಸಂಗ್ರಹಿಸಲಾಗುತ್ತಿದೆ. ಜ್ವರ ತಪಾಸಣಾ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಆಶಾ ಕಾರ್ಯಕತರ್ೆಯರು ಮನೆ ಮನೆ ಸರ್ವೇ ವೇಳೆ ಉಸಿರಾಟದ ತೊಂದರೆ ಮತ್ತು ತೀವ್ರತರದ ಜ್ವರ ಇದ್ದವರನ್ನು ಈ ಕೇಂದ್ರಗಳಿಗೆ ಕಳುಹಿಸುತ್ತಿದ್ದು, ಮಾದರಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಇಂತಹ ಲಕ್ಷಣ ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುರಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ 200 ಹಾಸಿಗೆಯ ಪರಿಶೀಲನಾ ಕ್ವಾರಂಟೈನ್ ಸೆಂಟರ್, ಅರಕೇರಾ(ಕೆ) ವಸತಿನಿಲಯದಲ್ಲಿ 50 ಹಾಸಿಗೆಯ ಪರಿಶೀಲನಾ ಕ್ವಾರಂಟೈನ್ ಸೆಂಟರ್, ಯಾದಗಿರಿ ಏಕಲವ್ಯ ಶಾಲೆಯಲ್ಲಿ 250 ಹಾಸಿಗೆಯ ಪರಿಶೀಲನಾ ಐಸೋಲೇಷನ್ ಸೆಂಟರ್, ಭೀಮರಾಯನಗುಡಿ ಕೃಷಿ ವಿದ್ಯಾಲಯದಲ್ಲಿ 250 ಹಾಸಿಗೆಯ ಪರಿಶೀಲನಾ ಐಸೋಲೇಷನ್ ಸೆಂಟರ್ ಮತ್ತು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಕೋವಿಡ್-19 ಆಸ್ಪತ್ರೆ ತೆರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಜಿಲ್ಲೆಯ ಚೆಕ್ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತುತರ್ು ಸೇವೆಗಳ ಮತ್ತು ಸರಕು ಸಾಗಣೆ ವಾಹನಗಳನ್ನು ಮಾತ್ರ ಚೆಕ್ಪೋಸ್ಟ್ಗಳಲ್ಲಿ ಬಿಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಕ್ಕಾಗಿ ಅಂತರ್ ಜಿಲ್ಲೆ ಪಾಸ್ ಇದ್ದವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಜಿಲ್ಲಾದ್ಯಂತ ಪ್ರತಿದಿನ ಅಬಕಾರಿ ದಾಳಿ ನಡೆಸಲಾಗುತ್ತಿದೆ. ಇನ್ನು ಅನವಶ್ಯಕವಾಗಿ ಮನೆಯಿಂದ ಹೊರಬಂದವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಲಾಕ್ಡೌನ್ ಮುಗಿಯುವವರೆಗೂ ಮರಳಿಸುವುದಿಲ್ಲ ಎಂದು ಹೇಳಿದರು. ಜಿಪಂ ಸಿಇಒ ಶಿಲ್ಪಾ ಶರ್ಮಾ, ಅಪರ ಡಿಸಿ ಪ್ರಕಾಶ್ ಜಿ.ರಜಪೂತ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net