

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಒಂದೂವರೆ ತಿಂಗಳಿಂದ ಜಿಲ್ಲೆಯನ್ನು ಬೇತಾಳನಂತೆ ಕಾಡುತ್ತಿರುವ ಕರೊನಾ ಹೆಮ್ಮಾರಿಯಿಂದ ಜನತೆ ಅಕ್ಷರಶಃ ಬೆಚ್ಚಿಬಿದ್ದರೂ ಚೇತರಿಕೆ ಆಗುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದು ಕೊಂಚ ಸಮಾಧಾನ ಮೂಡಿಸಿದೆ.
ಕರೊನಾ ಹಾವಳಿ ಆರಂಭದಲ್ಲಿ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣಗಳಿರಲಿಲ್ಲ. ಆದರೆ ಮಹಾರಾಷ್ಟ್ರದಿಂದ ಬಂದ ಕಾಮರ್ಿಕರಿಂದ ವೈರಸ್ ನಂಜು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ಇದರಿಂದ ಯಾದಗಿರಿ ರಾಜ್ಯದಲ್ಲಿ ಅತಿ ಹೆಚ್ಚು ಪಾಸಿಟಿವ್ ಸಂಖ್ಯೆ ಹೊಂದಿರುವ ಜಿಲ್ಲೆಗಳ ಪಟ್ಟಿಗೆ ಸೇರಿದ್ದಲ್ಲದೆ ಕೆಂಪು ವಲಯದಲ್ಲಿ ಗುರುತಿಸಿಕೊಂಡಿದೆ.
ಮುಂಬೈನಿಂದ ಬಂದ ಕಾಮರ್ಿಕರನ್ನು ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ನಲ್ಲಿಟ್ಟು ಅವರೆಲ್ಲರ ಗಂಟಲ ದ್ರವದ ಮಾದರಿ ಪರೀಕ್ಷೆಗಾಗಿ ಕಳುಹಿಸಿದ ನಂತರ ಪ್ರತಿನಿತ್ಯ 50-100ರವರೆಗೆ ಪಾಸಿಟಿವ್ ಪ್ರಕರಣಗಳು ಬರಲಾರಂಭಿಸಿದವು. ಇವರೆಲ್ಲರನ್ನೂ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅಷ್ಟೇ ಪ್ರಮಾಣದಲ್ಲಿ ಸೋಂಕಿತರು ಚೇತರಿಕೆ ಹೊಂದಿ ಡಿಸ್ಚಾಜರ್್ ಆಗಿದ್ದರಿಂದ ಜನತೆ ನಿಟ್ಟುಸಿರು ಬಿಡುತ್ತಿದ್ದಾರೆ.
ಜಿಲ್ಲೆಯಲ್ಲಿ 916 ಪಾಸಿಟಿವ್ ಪ್ರಕರಣಗಳಿದ್ದು, ಶುಕ್ರವಾರ ಒಂದೇ ದಿನ ಚೇತರಿಕೆ ಹೊಂದಿದ 118 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ಸೋಂಕಿನಿಂದ 685 ಜನ ಗುಣ ಹೊಂದಿದ್ದು, 223 ಸಕ್ರಿಯ ಪ್ರಕರಣಗಳಿವೆ. ಹೀಗಾಗಿ ಸೋಂಕಿಗೆ ತುತ್ತಾದವರ ಸಂಖ್ಯೆ ಶೇ.25 ಮಾತ್ರ ಎಂದು ಅಂದಾಜಿಸಲಾಗಿದೆ.
ವೈರಸ್ ಹರಡದಂತೆ ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ ಜನರಲ್ಲಿ ಜಾಗೃತಿ ಕೊರತೆಯಿಂದ ಮಾಸ್ಕ್ ಧರಿಸುತ್ತಿಲ್ಲ ಹಾಗೂ ಪರಸ್ಪರ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದರಿಂದ ಎಲ್ಲಿ ವೈರಸ್ ಸಮುದಾಯದಲ್ಲಿ ಹರಡುತ್ತದೆಯೋ ಎಂಬ ಆತಂಕ ಮನೆ ಮಾಡಿದೆ.