

ಬನ್ನೂರು: ಯಾಚೇನಹಳ್ಳಿಯ ಹಾಲು ಉತ್ಪಾದಕ ಸಹಕಾರ ಸಂಘವು ತಾಲೂಕಿನಲ್ಲಿಯೇ ಉತ್ತಮ ಸಂಘ ಎಂದು ಆಯ್ಕೆಯಾಗಿದ್ದು, ಪ್ರಸ್ತುತ 12.21 ಲಕ್ಷ ರೂ. ನಿವ್ವಳ ಲಾಭ ದೊರೆತಿದೆ ಎಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ತಿಳಿಸಿದರು.
ಪಟ್ಟಣದ ಯಾಚೇನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಸೋಮವಾರ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಅನೇಕರು ಅಧ್ಯಕ್ಷರು ತಮ್ಮ ಸೇವಾವಧಿಯಲ್ಲಿ ನಿರಂತರವಾಗಿ ಸೇವೆ ಮಾಡುತ್ತ ಬಂದಿರುವುದರಿಂದ ಬೇರೆಲ್ಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕಿಂತ ಉತ್ತಮಹಾದಿಯಲ್ಲಿದೆ. ಹಾಲು ಉತ್ಪಾದನೆ ಆದಾಯದ ಮೂಲವಾಗಿದ್ದು, ಮನೆಯ ಎಲ್ಲ ಕೆಲಸಗಳು ಇದರಿಂದಲೇ ನಡೆಯುತ್ತಿದೆ. ಹಾಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿ ಹೆಚ್ಚಿನ ಆದಾಯ ಒದಗಿಸುವುದು ಸಂಘದ ತಮ್ಮ ಮೂಲ ಉದ್ದೇಶವಾಗಿದೆ. ಇದೇ ರೀತಿ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಹಕಾರ ಸಂಘದ ಕಾರ್ಯದರ್ಶಿ ವೈ.ಎಸ್.ರಾಹುಲ್‌ಗೌಡ 2024-25ನೇ ಸಾಲಿನ ಖರ್ಚು ವೆಚ್ಚವನ್ನು ಮಂಡಿಸಿ, 2025-26ನೇ ಸಾಲಿನಲ್ಲಿ ಸಂಘದಿಂದ ಕೈಗೊಳ್ಳುವ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ಪೂರೈಸಿದವರು ಹಾಗೂ ಮಾಜಿ ಅಧ್ಯಕ್ಷರಾದ ವೈ.ಕೆ.ಬೋರೇಗೌಡ, ವೈ.ಎಲ್.ಸಣ್ಣಮರೀಗೌಡ, ವೈ.ಎಸ್.ಲೋಕೇಶ್, ವೈ.ಜೆ.ಪುಟ್ಟರಾಜು, ವೈ.ಎಸ್. ಶಿವಕುಮಾರ್, ವೈ.ಎಂ.ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಸಹಕರ ಸಂಘದ ಅಧ್ಯಕ್ಷ ವೈ.ಕೆ.ಉಮೇಶ್, ಉಪಾಧ್ಯಕ್ಷ ದುರ್ಗೇಶ್, ವೈ.ಎಂ.ಚಂದ್ರು, ನಿವೃತ್ತ ಪ್ರಾಂಶುಪಾಲ ಗೂಳೇಗೌಡ, ಬಸವರಾಜು, ದೊಡ್ಡಸಿದ್ದೇಗೌಡ, ವೈ.ಕೆ. ಪ್ರಕಾಶ್, ನಾಗಮ್ಮ ನಾಗಯ್ಯ, ನಾಗಮ್ಮ ನಾಗಣ್ಣ, ಮಹದೇವು, ರಮೇಶ್‌ರಾವ್, ಕಾರ್ಯನಿರ್ವಹಣಾಧಿಕಾರಿ ವೈ.ಕೆ.ಕ್ಯಾತೇಗೌಡ, ಮೈಮುಲ್‌ನ ವಿಸ್ತರಣಾಧಿಕಾರಿ ದಿವ್ಯಶ್ರೀ, ವೈ.ಜಿ. ಪುಟ್ಟರಾಜು, ಯೋಗೇಶ್ ಇದ್ದರು.