

ಮಂಗಳೂರು : ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣದ ಯಾನ್ ಸೂಪರ್ ಸ್ಟಾರ್ ಸಿನಿಮಾ ನಗರದ ಬಿಗ್ ಸಿನೆಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ದೀಪ ಬೆಳಗಿದ ಮುಂಬೈಯ ಉದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಮಾತನಾಡಿ ಮುಂಬೈ ಹಾಗೂ ತುಳು ನಾಡಿನ ಕಲಾವಿದರು
ಯಾನ್ ಸೂಪರ್ ಸ್ಟಾರ್ ಸಿನಿಮಾದಲ್ಲಿ ನಟಿಸಿದ್ದಾರೆ. ತುಳುವರು ಈ ಸಿನಿಮಾವನ್ನು ಇಷ್ಟಪಟ್ಟು ಗೆಲ್ಲಿಸಬೇಕು. ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣಲಿ. ಮುಂದೆಯೂ ಈ ತಂಡ ಗುಣಮಟ್ಟದ ಸಿನಿಮಾ ಮಾಡಿ ಜನಮನ್ನಣೆ ಪಡೆಯಲಿ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಯಾವುದೇ ತುಳು ಸಿನಿಮಾ ಬಂದರೂ ತುಳುವರು ಸೋಲಲು ಬಿಡುವುದಿಲ್ಲ ಎನ್ನುವ ನಂಬಿಕೆ ನಮ್ಮಲ್ಲಿದೆ. ಯಾನ್ ಸೂಪರ್ ಸ್ಟಾರ್ ಮುಂಬೈ ತುಳುವರಿಂದ ಪ್ರಶಂಸೆಗೊಳಪಟ್ಟ ಸಿನಿಮಾವಾಗಿದ್ದು, ಇದರಲ್ಲಿ ತುಳುನಾಡಿನ ಅನೇಕ ದಿಗ್ಗಜ ಕಲಾವಿದರು ನಟಿಸಿದ್ದಾರೆ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ , ನಟ ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಶುಭ ಹಾರೈಸಿದರು.
ವಿಜಯಕುಮಾರ್ ಕೊಡಿಯಾಲ್ಬೈಲ್, ಶಿವಧ್ವಜ್ ಶೆಟ್ಟಿ, ಜಯರಾಮ ಶೇಖ, ಅಡ್ಯಾಡ್ ಮಾಧವ ನಾಯ್ಕ್, ಗಿರೀಶ್.ಎಂ ಶೆಟ್ಟಿ ಕಟೀಲು, ಹರೀಶ ವಾಸು ಶೆಟ್ಟಿ, ಮಾನಸಿ ಸುಧೀರ್, ಸಂಗೀತ ನಿರ್ದೇಶಕ ವಿ. ಮನೋಹರ್, ನವೀನ್ ಡಿ. ಪಡೀಲ್, ದಯಾನಂದ ಶೆಟ್ಟಿ, ತಮ್ಮ ಲಕ್ಷ್ಮಣ, ರಾಮ್ ಶೆಟ್ಟಿ ಮುಂಬೈ, ಬಾಳ ಜಗನ್ನಾಥ ಶೆಟ್ಟಿ, ಭೋಜರಾಜ್ ವಾಮಂಜೂರು , ಮೋಹನ್ ಕೊಪ್ಪಲ ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಐನಾಕ್ಸ್,ಭಾರತ್ ಸಿನಿಮಾಸ್ , ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.