ನಾಡಿನ ಶ್ರೇಯೋಭಿವೃದ್ಧಿಗೆ ಯಾಗಗಳು ನಿರಂತರವಾಗಿ ನಡೆಯಲಿ

Chandika Yaaga
Published on

ಬೆಂಗಳೂರು: ಲೋಕಕಲ್ಯಾಣಾರ್ಥ ಕೈಗೊಳ್ಳುವ ಯಾಗಗಳು ನಿರಂತರವಾಗಿ ನಡೆಯಲಿ. ಹೋಗ, ಯಾಗಗಳ ಅಗತ್ಯತೆಯನ್ನು ಋಷಿಮುನಿಗಳು ಕಂಡುಕೊಂಡಿದ್ದರು. ಎಲ್ಲರಿಗೂ ಒಳಿತನ್ನು ಇಂತಹ ಯಾಗ, ಹೋಮಗಳು ಆಶಿಸುತ್ತವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಾಧೀಶ್ವರ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಹಾಗೂ ಚಂಡಿಕಾ ಯಾಗ ನಡೆಯುತ್ತಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೊಮ್ಮಾಯಿ ಮಾತನಅಡಿ ಕಾಲಕಾಲಕ್ಕೆ ಋಷಿಮುನಿಗಳು ನಾಡಿನ ಶ್ರೇಯೋಭಿವೃದ್ಧಿಗೆ ಯಾಗ ಮಾಡುತ್ತಾ ಬಂದಿರುವುದು ನಮ್ಮ ಸಂಸ್ಕೃತಿಯಲ್ಲಿದೆ. ಯಾವಾಗ ಅಗತ್ಯವಿದೆಯೋ ಆಗ ಋಷಿ ಮುನಿಗಳು ಯಾಗ ಮಾಡುತ್ತಾ ಬಂದಿದ್ದಾರೆ ಎಂದರು.

ಲೋಕ ಕಲ್ಯಾಣಕ್ಕಾಗಿ ಇಂತಹ ಯಾಗಗಳು ನಡೆಯುತ್ತಿರಬೇಕು. ಒಂದು ನೂರು ದಿನಗಳಿಗೂ ಹೆಚ್ಚು ಕಾಲ ನಡೆಯುವ ಸ್ವಾಮೀಜಿಗಳ ಚಾತುರ್ಮಾಸ್ಯಕ್ಕೆ ಮಾಜಿ ಮಂತ್ರಿ ಕೆ.ಗೋಪಾಲಯ್ಯ ಮತ್ತು ಕುಟುಂಬ ಸೇವಾ ಕಾರ್ಯ ಮಾಡುತ್ತಿದೆ ಅವರಿಗೆ ಶ್ರೇಯಸ್ಸು ದೊರೆಯಲಿ. ಚಂಡಿಕಾ ಯಾಗದಿಂದ ನಾಡಿನ ಎಲ್ಲರಿಗೂ ಒಳಿತಾಗಲಿ ಎಂದು ಬೊಮ್ಮಾಯಿ ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net