

ಮೈಸೂರು: ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಅಧ್ಯಕ್ಷರಾಗಿ ವೈ.ಎನ್.ಅರವಿಂದ ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶ್ವೇಶ್ವರನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ವೈ.ಎನ್.ಅರವಿಂದ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರು ಅರವಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮಹಾಮಂಡಳಿಗೆ ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ 27 ಜನರು ಸ್ಪರ್ಧಿಸಿ 13 ಜನರು ಚುನಾಯಿತರಾಗಿದ್ದರು. ವೈ.ಎನ್.ಅರವಿಂದ, ಟಿ.ಅಂಜಿಬಾಬು, ಈರಯ್ಯ, ಎನ್.ಮಲ್ಲಿಕಾರ್ಜುನ್, ಸಿ.ಜಿ.ಕುಮಾರ, ಡಿ.ಗಂಗರಾಜು, ಆರ್.ಚಿಕ್ಕಯ್ಯ, ಸೈಯದ್, ಜೆ.ಸಗಾಯಂ, ಕೆ.ಮುರುಗನ್, ಕೆ.ಲಿಂಗರಾಜು, ನಿಸಾರ್ ಅಹಮದ್, ಶೇಖಪ್ಪ ಮಲ್ಲಪ್ಪ ಮುಗಳಕೇರಿ ಚುನಾಯಿತರಾಗಿದ್ದರು.