ಬಿಜೆಯಿಯಿಂದ ಸ್ಕ್ಯಾಮ್ ರಾಮಯ್ಯ ಅಭಿಯಾನ

270922 Ballari Scam Ramayya Abhiyana
ಬಳ್ಳಾರಿಯ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಸ್ಕ್ಯಾಮ್ ರಾಮಯ್ಯ ಅಭಿಯಾನ ನಡೆಸಿದರು.
Published on

ಬಳ್ಳಾರಿ: ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಲವು ಹಗರಣಗಳ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳವಾರ ಸ್ಕ್ಯಾಮ್ ರಾಮಯ್ಯ ಅಭಿಯಾನ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರವರ ಸ್ಕಾಮ್ ರಾಮಯ್ಯ, ಜನಸಾಮಾನ್ಯರ ಮುಖ್ಯಮಂತ್ರಿಯವರಿಗೆ ನಮ್ಮ ಬೆಂಬಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಪೊಸ್ಟರ್ ಹಿಡಿದು ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಗರಣದ ಪೋಸ್ಟರ್‌ಗಳನ್ನು ಗಡಗಿ ಚೆನ್ನಪ್ಪ ವೃತ್ತದ ಗೋಡೆ ಮತ್ತು ಕಾಂಪೌಂಡ್‌ಗಳಿಗೆ ಅಂಟಿಸಿ ಪ್ರತಿಭಟಿಸಿದರು.

ಜಿಲ್ಲಾಧ್ಯಕ್ಷ ಗೋನಾಳು ಮುರಾಹರಿಗೌಡ, ಬುಡಾ ಅಧ್ಯಕ್ಷ ಮಾರುತಿಪ್ರಸಾದ, ಮುಖಂಡರಾದ ಗುರುಲಿಂಗನಗೌಡ, ಕೆ.ಎಸ್.ಅಶೋಕ್ ಕುಮಾರ, ಹನುಮಂತಪ್ಪ, ರಾಜೀವ್ ತೊಗರಿ, ಗಿರಿಶ್ ಬೆಣಕಲ್, ಎಸ್.ಕೆ.ಗಂಗಾಧರ, ಅಂಜಿ, ಜ್ಯೋತಿಪ್ರಕಾಶ್, ಸುಮಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net