ಕ್ರಿಸ್‌ಮಸ್ ವಿಶೇಷ ರೈಲು

images
Published on

ಮಂಗಳೂರು : ಕ್ರಿಸ್‌ಮಸ್ ಹಬ್ಬದ ಸಂದರ್ಭ ಪ್ರಯಾಣಿಕರ ಸೌಲಭ್ಯಕ್ಕಾಗಿ ಸೆಂಟ್ರಲ್ ರೈಲ್ವೆಯು ವಿಶೇಷ ರೈಲು ಓಡಾಟ ಸೇವೆ ಕಲ್ಪಿಸಿದೆ.
ಲೋಕಮಾನ್ಯ ತಿಲಕ್ (ಟಿ)-ತಿರುವನಂತಪುರಂ ನಾರ್ತ್ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.01463) ಡಿ.19ರಿಂದ ಜ.9ರವರೆಗೆ (ಪ್ರತೀ ಗುರುವಾರ) ಸಾಯಂಕಾಲ 4ಕ್ಕೆ ಲೋಕಮಾನ್ಯ ತಿಲಕ್ (ಟಿ) ಸ್ಟೇಷನ್‌ನಿಂದ ಹೊರಡಲಿದ್ದು ಮರುದಿನ ರಾತ್ರಿ 10.45ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
ತಿರುವನಂತಪುರಂ ನಾರ್ತ್ -ಲೋಕಮಾನ್ಯ ತಿಲಕ್ (ಟಿ) ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.01464) ಡಿ.21ರಿಂದ ಜ.11ರವರೆಗೆ (ಪ್ರತೀ ಶನಿವಾರ) ಸಾಯಂಕಾಲ 4.20ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಡಲಿದ್ದು ಮರುದಿನ ರಾತ್ರಿ 12.45ಕ್ಕೆ ಲೋಕಮಾನ್ಯ ತಿಲಕ್ (ಟಿ) ಸ್ಟೇಷನ್ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.
..............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net