

ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಕಿರಿಯ ಸಹೋದರ, ಉದ್ಯಮಿ ಮಮ್ತಾಜ್ ಆಲಿ (52) ಅವರು ನಾಪತ್ತೆಯಾಗಿದ್ದು, ಅವರ ಕಾರು ಕೂಳೂರು ಸೇತುವೆ ಸಮೀಪ ಭಾನುವಾರ ಮುಂಜಾನೆ ಅಪಘಾತಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ ಮುಮ್ತಾಜ್ ಆಲಿಯವರು ಮುಂಜಾನೆ ಸುಮಾರು 3 ಗಂಟೆಗೆ ಮನೆಯಿಂದ ಕಾರಿನಲ್ಲಿ ತೆರಳಿದ್ದಾರೆ. ಬಳಿಕ ಕಾರನ್ನು ಸೇತುವೆ ಬಳಿ ನಿಲ್ಲಿಸಿ ನದಿಗೆ ಜಿಗಿದಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.