ಹನಿ 'ನೀರು' ಅಮೂಲ್ಯ ಮಿತವಾಗಿ ಬಳೆಸೋಣ..!

IMG-20250405-WA0035.jpg
Published on

ಬೆಳಗಾವಿ; ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಸಹಯೋಗದಲ್ಲಿ ಶನಿವಾರ ನಗರದಲ್ಲಿ 'ನೀರು ಉಳಿಸಿ ಪರಿಸರ ರಕ್ಷಿಸಿ' ಜಾಗೃತಿ ಜಾಥಾ ಜರುಗಿತು.

ನಗರದ ಚನ್ನಮ್ಮ ವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ನಿರಂಜನರಾಜ್ ಅರಸ್ ಜಾಗೃತಿ ಜಾಥಾಗೆ ವಿಧ್ಯುಕ್ತ ಚಾಲನೆ ನೀಡಿ, ವಿಜಯವಾಣಿಯ ನೀರು ಉಳಿಸಿ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

'ನೀರು ಉಳಿಸಿ' ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಂದ ಮೊಳಗಿದ ವಿವಿಧ ಘೋಷವಾಕ್ಯಗಳು ಜನರಲ್ಲಿ ಅರಿವು ಮೂಡಿಸಿದವು. ವಿವಿಧೆಡೆ

ವಿಜಯವಾಣಿಯ ನೀರು ಉಳಿಸಿ ಜಾಗೃತಿ ಭಿತ್ತಿಪತ್ರ ಅಂಟಿಸಿ ಸಾಮಾಜಿಕ ಕಳಕಳಿ ತೆರೆಯಲಾಯಿತು .ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದ ಜಾಗೃತಿ ಜಾಥಾ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ತಲುಪಿ ಸಮಾರೋಪಗೊಂಡಿತು.

ಜಾಥಾದಲ್ಲಿ ವಿಜಯವಾಣಿ ಸ್ಥಾನಿಕ ಸಂಪಾದಕರಾದ ಮಹೇಶ ವಿಜಾಪುರ, ಡಿಸಿಪಿ ರೋಷನ್ ಜಗದೀಶ್, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಗಿರೀಶ್ ಪರ್ವತಮಠ, ಸಿಪಿಐ ಜೆ.ಎಂ.ಖಾಲಿಮಿರ್ಚಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net