ದೂಧ್ ಸಾಗರ ವೀಕ್ಷಣೆಗೆ ‌ನಿಷೇಧ ಏರಿದ ರೈಲ್ವೆ ಇಲಾಖೆ

IMG-20230722-WA0003.jpg
Published on


ಬೆಳಗಾವಿ:ವಿಶ್ವ ಪ್ರಸಿದ್ಧ ದೂಧ್‌ಸಾಗರ್‌ ಜಲಪಾತದ ಸಮೀಪ ವೀಕ್ಷಣೆಗೆ ನೈಋತ್ಯ ರೈಲ್ವೆ ಇಲಾಖೆ ನಿಷೇಧಿಸಿದೆ.
ಮಳೆಗಾಲ ಆರಂಭವಾದರೆ ಗೋವಾ ಕರ್ನಾಟಕ ಗಡಿ ಭಾಗದಲ್ಲಿರುವ ದೂದ್ ಸಾಗರ್ ವೀಕ್ಷಿಸಲು ಪ್ರವಾಸಿಗರು ಮುಗಿಬೀಳುವುದು ಸಾಮಾನ್ಯ. ಇಲ್ಲಿ ರೈಲು ನಿಲುಗಡೆ ಇಲ್ಲದ ಕಾರಣ ಹೆಚ್ಚಿನವರು ಹಳಿಗಳ ಮೇಲೆಯೇ ನಡೆದು ಬರುತ್ತಾರೆ.  ಇದು ಬಹಳ ಅಪಾಯಕಾರಿಯಾಗಿದದೆ.ಈ ಬಗ್ಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.
ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಾ ಬೀಳುವ ನೀರು. ಇನ್ನೊಂದೆಡೆ ಚಲಿಸುವ ರೈಲು. ಅದ್ಭುತವಾದ ನಯನಮನೋಹರ ದೃಶ್ಯ ಮಳೆಗಾಲದಲ್ಲಿ ಅದರ ಸೊಗಡು ಮತ್ತಷ್ಟು ಅದ್ಭುತ. ಹೀಗೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಡುವುದಕ್ಕೆ ಕಡಿವಾಣ ಹಾಕಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net