ಬರವಣಿಗೆಗೆ ಅಧ್ಯಯನದ ಜತೆಗೆ ಅನುಭವವೂ ಅಗತ್ಯ

ಮುದ್ದು ಮೂಡುಬೆಳ್ಳೆಯವರ ಜೀವನ ಕಥನದ  ಕೃತಿಯನ್ನು  ಪ್ರೊ.ಬಿ.ಎ.ವಿವೇಕ ರೈ  ಬಿಡುಗಡೆಗೊಳಿಸಿದರು. ಡಾ.ಶ್ರೀನಾಥ್ ಎಂ.ಪಿ., ಪುಷ್ಪರಾಜ್ ಬಿ.ಎನ್., ಕಲ್ಲೂರು ನಾಗೇಶ ಉಪಸ್ಥಿತರಿದ್ದರು.
ಮುದ್ದು ಮೂಡುಬೆಳ್ಳೆಯವರ ಜೀವನ ಕಥನದ ಕೃತಿಯನ್ನು ಪ್ರೊ.ಬಿ.ಎ.ವಿವೇಕ ರೈ ಬಿಡುಗಡೆಗೊಳಿಸಿದರು. ಡಾ.ಶ್ರೀನಾಥ್ ಎಂ.ಪಿ., ಪುಷ್ಪರಾಜ್ ಬಿ.ಎನ್., ಕಲ್ಲೂರು ನಾಗೇಶ ಉಪಸ್ಥಿತರಿದ್ದರು.
Published on
ಮಂಗಳೂರು: ಬರವಣಿಗೆಗೆ ಅಧ್ಯಯನದ ಜತೆಗೆ ಅನುಭವವೂ ಅಗತ್ಯ. ಜೀವನಾನುಭವಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಬರೆಯುವಾತ ಉತ್ತಮ ಲೇಖಕನಾಗುತ್ತಾನೆ. ಮುದ್ದು ಮೂಡುಬೆಳ್ಳೆಯವರ ಜೀವನ ಚಿತ್ರಣದ ಈ ಪುಸ್ತಕ ಸಾಹಸ ಗಾಥೆಯಾಗಿ ಮೂಡಿ ಬಂದಿದೆ ಎಂದು ವಿಶ್ರಾಂತ ಕುಲಪತಿ, ತುಳು ಕನ್ನಡ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಡಾ.ಎಸ್.ಎನ್.ಡಿ. ಪೂಜಾರಿ ಅವರು ಬರೆದಿರುವ ಮುದ್ದು ಮೂಡುಬೆಳ್ಳೆಯವರ ಜೀವನ ಕಥನ ‘ಎ ಬಯೊಗ್ರಾಫಿಕಲ್ ಸ್ಕೆಚ್ ಆಫ್ ಮುದ್ದು ಮೂಡುಬೆಳ್ಳೆ’ ಎಂಬ ಆಂಗ್ಲ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮುದ್ದು ಮೂಡುಬೆಳ್ಳೆಯವರು ಕನ್ನಡ, ತುಳು, ಇಂಗ್ಲಿಷ್, ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಬರೆದಿದ್ದಾರೆ. ಕರಾವಳಿಯನ್ನು ಬಹುಭಾಷೆಯ ಆಡೊಂಬಲ ಎಂದು ಕರೆಯುತ್ತೇವೆ. ಬಹುತ್ವ ಎನ್ನುವುದು ಕೇವಲ ಪ್ರದರ್ಶನವಲ್ಲ. ಸಾಹಿತ್ಯದಲ್ಲಿಯೂ ಬಹುತ್ವವು ಬೆರೆತುಕೊಂಡಾಗ ಅದು ನಿಜವಾದ ಸಾಹಿತ್ಯದ ಸಮನ್ವಯವಾಗುತ್ತದೆ. ಅಂತಹ ಸಮನ್ವಯವನ್ನು ಯಾವುದೇ ದೊಡ್ಡ ಮಾತುಗಳಿಲ್ಲದೆ ಮುದ್ದು ಮೂಡುಬೆಳ್ಳೆ ಬರೆದಿದ್ದಾರೆ ಎಂದು ಪ್ರೊ. ವಿವೇಕ್ ರೈ ಹೇಳಿದರು.
ಲೇಖಕರಿಗೆ ಊರಿನ ಹೆಸರು ಅಂಟಿಕೊಂಡಾಗ ಊರು ಜನಪ್ರಿಯವಾಗುತ್ತದೆ. ಮೂಡುಬೆಳ್ಳೆ ಎನ್ನುವ ಹೆಸರು ಬೆಳ್ಳೆ, ಮೂಡುಬೆಳ್ಳೆ, ಪಡುಬೆಳ್ಳೆಯಾಗಿದೆ. ಆದರೆ ಕನ್ನಡ ಸಾಹಿತ್ಯದಲ್ಲಿ ಮೂಡುಬೆಳ್ಳೆ ಎಂದರೆ ಮುದ್ದು ಮೂಡುಬೆಳ್ಳೆ ನಮಗೆಲ್ಲಾ ಪ್ರಮುಖವಾಗಿದೆ. ಒಂದು ಊರಿನ ಪ್ರಾಮುಖ್ಯತೆಯು ಆ ಊರಿನ ಕೆಲ ವ್ಯಕ್ತಿಗಳ ಸಾಧನೆಯಿಂದಲೂ ಮಹತ್ವವನ್ನು ಪಡೆಯುತ್ತದೆ. ಅಂತಹ ಅನೇಕರಿದ್ದು, ಅವರಲ್ಲಿ ಮುದ್ದು ಮೂಡುಬೆಳ್ಳೆಯವರೂ ಪ್ರಮುಖರು ಎಂದು ಪ್ರೊ.ವಿವೇಕ ರೈ ಶ್ಲಾಘಿಸಿದರು.
ಕಸಪಾ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ಅತಿಥಿಯಾಗಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಲೇಖಕ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net