ಲೇಖಕಿಯರ ಸಂಘದ ವಾರ್ಷಿಕೋತ್ಸವ

2 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ಷಣಕ್ಕೊಂದು ಅತ್ಯಾಚಾರ ನಡೆಯುತ್ತಿರುವ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ತಮ್ಮ ಅಭಿಪ್ರಾಯವನ್ನೇ ಇಡೀ ಸಮಾಜದ ಮನೋಭಾವನೆ ಎಂಬಂತೆ ಬಿಂಬಿಸುತ್ತ ರೂಪಿಸುತ್ತಿರುವ ಸಂದರ್ಭದಲ್ಲಿ ತನ್ನ ಬರಹಕ್ಕೆ ಭಾಷೆ ನಿರ್ಮಿಸಿಕೊಳ್ಳುವ ಸವಾಲು ಲೇಖಕಿಯರ ಮುಂದಿದೆ ಎಂದು ಲೇಖಕಿ ಡಾ ಕೆ. ಆರ್​ ಸಿದ್ಧಗಂಗಮ್ಮ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧಕರಿಗೆ ಸನ್ಮಾನಿಸಲಾಯಿತು. ನಂತರ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಚಿಂತಕಿ ಡಾ. ವಿನಯಾ ಒಕ್ಕುಂದ ಮಾತನಾಡಿದರು. ಕವಯಿತ್ರಿ ಪ್ರೇಮಾ ನಡುವಿನಮನಿ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಸದಸ್ಯರಾದ ಮೇಘಾ ಹುಕ್ಕೇರಿ, ಉಷಾ ಗದ್ದಗಿಮಠ, ಪ್ರಜ್ಞಾ ಮತ್ತಿಹಳ್ಳಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net