ಪಣಿಯಾಡಿ ಪ್ರಶಸ್ತಿಗೆ 'ಅಕೇರಿದ ಎಕ್ಕ್​' ಆಯ್ಕೆ...

Paniyaadi
Published on

ಶಾರದಾ ಎ. ಅಂಚನ್​ ಕೊಡವೂರು ರಚಿತ ತುಳು ಕಾದಂಬರಿ

ವಿಜಯವಾಣಿ ಸುದ್ದಿಜಾಲ ಉಡುಪಿ

ತುಳುಕೂಟ (ರಿ.) ಉಡುಪಿ ವತಿಯಿಂದ ಪ್ರತಿವರ್ಷ ನೀಡುವ ದಿ. ಎಸ್​.ಯು. ಪಣಿಯಾಡಿ ಪ್ರಶಸ್ತಿಗೆ ಈ ಬಾರಿ ಮುಂಬಯಿಯ ಶಾರದಾ ಎ. ಅಂಚನ್​ ಕೊಡವೂರು ಅವರ ಅಕೇರಿದ ಎಕ್ಕ್​ ತುಳು ಕಾದಂಬರಿಯ ಹಸ್ತಪ್ರತಿ ಆಯ್ಕೆಯಾಗಿದೆ.

ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳುವಿನ ಮೊದಲ ಕಾದಂಬರಿಕಾರ ಎಸ್​. ಯು. ಪಣಿಯಾಡಿ ಅವರು ತುಳು ಚಳವಳಿಗೆ ಚಾಲನೆ ನೀಡಿದ್ದರು. ಅವರ ಸಾಧನೆಯ ಸ್ಮರಣಾರ್ಥದ ಸದುದ್ದೇಶದಿಂದ 30 ವರ್ಷದಿಂದ ತುಳುಕೂಟ ಉಡುಪಿ ವತಿಯಿಂದ ಪಣಿಯಾಡಿ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಶಸ್ತಿಯ ಆಯ್ಕೆಗೆ ತೀರ್ಪುಗಾರರಾಗಿ ನಿತ್ಯಾನಂದ ಪಡ್ರೆ, ಸುಲೋಚನಾ ಪಚ್ಚಿನಡ್ಕ, ಪುತ್ತಿಗೆ ಪದ್ಮನಾಭ ರೈ ಸಹಕರಿಸಿದರು.

ಪಣಿಯಾಡಿ ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್​ ತಿಂಗಳಲ್ಲಿ ನಡೆಯಲಿದೆ ಎಂದು ಉಡುಪಿ ತುಳು ಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕಾರ್ಯದರ್ಶಿ ಗಂಗಾಧರ ಕಿದಿಯೂರು ಹಾಗೂ ಪ್ರಶಸ್ತಿಯ ಸಂಚಾಲಕಿ ಶಿಲ್ಪಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಬಯಿಯಲ್ಲಿ ರಕ್ತ ನಿಧಿ ತಂತ್ರಜ್ಞೆ

ಪ್ರಶಸ್ತಿಗೆ ಆಯ್ಕೆಯಾದ ಬರಹಗಾರ್ತಿ ಶಾರದಾ ಅವರು ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದು, ಮೂಲತ: ಉಡುಪಿ ಜಿಲ್ಲೆಯ ಕೊಡವೂರಿನವರು. ಬಿಎಸ್​ಸಿ ಹಾಗೂ ಡಿಪ್ಲೊಮಾ ಇನ್​ ಮೆಡಿಕಲ್​ ಲ್ಯಾಬೋರೇಟರಿ ಟೆಕ್ನಾಲಜಿ ವ್ಯಾಸಂಗ ಮಾಡಿದ್ದು, ನವೀ ಮುಂಬಯಿಯ ಎಂಜಿಎಂ ಮೆಡಿಕಲ್​ ಕಾಲೇಜಿನಲ್ಲಿ ರಕ್ತ ನಿಧಿ ತಂತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಳು ಹಾಗೂ ಕನ್ನಡದಲ್ಲಿ 18 ಕೃತಿಗಳು ಈಗಾಗಲೇ ಪ್ರಕಟಗೊಂಡು ಹಲವು ಪ್ರತಿಷ್ಠಿತ ಪುರಸ್ಕಾರ ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net