ಅನುಪಮಾ ನಿರಂಜನ ಪ್ರಶಸ್ತಿಗೆ ಲೇಖಕಿ ರಮಾಕುಮಾರಿ ಆಯ್ಕೆ

Vijayavani-logo
Published on

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಡಾ. ಅನುಪಮಾ ನಿರಂಜನ ಪ್ರಶಸ್ತಿಗೆ ಹಿರಿಯ ಕವಯತ್ರಿ ಹಾಗೂ ಲೇಖಕಿ ಬಾ.ಹ. ರಮಾಕುಮಾರಿ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ಐದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.

ಡಾ. ಅನುಪಮಾ ನಿರಂಜನ ಹುಟ್ಟುಹಬ್ಬದ ನಿಮಿತ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಕಥಾ ಸ್ಪರ್ಧೆಯಲ್ಲಿ ಮಂಗಳೂರು ಕೊಳಚಪ್ಪುವಿನ ಬಿ.ಸತ್ಯವತಿ ಭಟ್ ಪ್ರಥಮ ಬಹುಮಾನ (2,500 ರೂ.) ಪಡೆದಿದ್ದಾರೆ. ದ್ವಿತೀಯ ಬಹುಮಾನ (2,000 ರೂ.) ಹೊಸಪೇಟೆಯ ಗಾಯತ್ರಿ ಕುಲಕರ್ಣಿ ಹಾಗೂ ತೃತೀಯ ಬಹುಮಾನ (1,500 ರೂ.) ಮಡಿಕೇರಿಯ ರಾಧಿಕಾ ವಿಶ್ವನಾಥ್ ಆಯ್ಕೆಯಾಗಿದ್ದಾರೆ.

ಈ ತಿಂಗಳ 17ರ ಸಂಜೆ 5 ಗಂಟೆಗೆ ನರಸಿಂಹರಾಜ ಕಾಲೋನಿಯಲ್ಲಿರುವ ಬಿಎಂಶ್ರೀ ಕಲಾಭವನದಲ್ಲಿ ನಿಗದಿಯಾಗಿರುವ ಡಾ. ಅನುಪಮಾ ನಿರಂಜನ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿತರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net