

ಕಡೂರು: ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ.7ರವರೆಗೆ ರಾಜ್ಯಾದ್ಯಂತ ನಡೆಸುವ ಜಾತಿ ಜನಗಣತಿಯಲ್ಲಿ ಗಣತಿದಾರರು ಮನೆ, ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಾಗ ಜಿಲ್ಲೆಯ ಕುರುಬ ಸಮಾಜದವರು ಜಾತಿ ಕಾಲಂನಲ್ಲಿ ಕುರುಬ ಎಂದು ಬರೆಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಶಾಂತೇಗೌಡ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಕುರುಬ ಸಮಾಜದ ಜಾತಿಗಣತಿಯ ಮಾಹಿತಿ ಕುರಿತಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕುರುಬ ಸಮಾಜದ ಪ್ರತಿಯೊಬ್ಬರಿಗೂ ಸರ್ಕಾರದ ಸವಲತ್ತುಗಳನ್ನು ಸಮಪರ್ಕವಾಗಿ ದೊರಕಲು ಜಾತಿಗಣತಿ ಸಹಕಾರಿಯಾಗಿದೆ. ಕುರುಬ ಸಮಾಜದವರು ಜಾತಿಗಣತಿಯಲ್ಲಿ ಪೂರಕ ಮಾಹಿತಿ ನೀಡಬೇಕು ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕುರುಬ ಸಮಾಜ ರಾಜ್ಯದಲ್ಲಿ ನಿಖರ ಜನಸಂಖ್ಯೆ ಮಾಹಿತಿಗಾಗಿ ಸಮೀಕ್ಷೆಯಲ್ಲಿ ಕುರುಬ ಸಮಾಜದ ಪ್ರತಿಯೊಬ್ಬರೂ ಜಾತಿಗಣತಿಯಲ್ಲಿ ಸಹಕರಿಸಬೇಕಿದೆ. ಸರ್ಕಾರದ ಗೆಜೆಟ್ ಕಾಲಂನಲ್ಲಿ ಎ-0809 ಕೋಡ್‌ಸಂಖ್ಯೆಗೆ ಕುರುಬ ಎಂದು ನಮೂದಿಸಿ ಕುಲ ಕಸುಬು ಕಾಲಂನಲ್ಲಿ ಕುರಿ ಸಾಕಾಣಿಕೆ ಹಾಗೂ ಧರ್ಮದ ಕಾಲಂನಲ್ಲಿ ಹಿಂದು ಎಂದು ನಮೂದಿಸಬೇಕು. ಜತೆಯಲ್ಲಿ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯರ ಬಗ್ಗೆ ಅಂಕಿ, ಅಂಶಗಳ ಸಹಿತ ಪೂರಕ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕಿದೆ. ಇದು ಸಾಮಾಜಿಕ, ಮಕ್ಕಳ ಶಿಕ್ಷಣ, ಆರ್ಥಿಕ ಸೇರಿದಂತೆ ಸರ್ಕಾರದ ಇತರೆ ಸವಲತ್ತುಗಳನ್ನು ಪಡೆದುಕೊಳ್ಳಲು ಉತ್ತಮ ಅವಕಾಶ ನೀಡಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಕೆ.ಎಚ್.ಎ.ಪ್ರಸನ್ನ, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ತಾಲೂಕು ಪ್ರಧಾನಕಾರ್ಯದರ್ಶಿ ಕೆ.ಎಚ್. ಶಂಕರ್, ಪುರಸಭೆ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಈರಳ್ಳಿ ರಮೇಶ್, ಅಹಿಂದ ಜಿಲ್ಲಾಧ್ಯಕ್ಷ ತ್ರಿಭುವನ್, ಮುಖಂಡರಾದ ಸಿಗೇಹಡ್ಲು ಹರೀಶ್, ರೇವಣ್ಣ, ಕೆ.ಜಿ.ಲೋಕೇಶ್ವರ್, ಆಸಂಧಿ ಕಲ್ಲೇಶ್, ಕಂಸಾಗರ ಶೇಖರ್, ತಿಪ್ಪೇಶ್, ಕೆ.ಪ್ರಕಾಶ್, ಕೆ.ಜಿ.ಶ್ರೀನಿವಾಸ್ ಮೂರ್ತಿ, ಚೇತನ್, ಯರದಕೆರೆ ರಾಜಪ್ಪ, ನಂಜುಂಡ ಸ್ವಾಮಿ, ಚಂದ್ರಪ್ಪ, ಯರದಕೆರೆ ಓಂಕಾರ್, ಚೇತನ್, ಕೆ.ಎಂ.ನಾಗರಾಜ್, ನಿರಂಜನ್ ಮತ್ತಿತರಿದ್ದರು.