ಜೈನ್​ ಮಾತ್ರ ಬರೆಸಲು ಸ್ವಾಮೀಜಿ ಸಲಹೆ

Published on

ಹುಬ್ಬಳ್ಳಿ: ಗಣತಿ ಸಂದರ್ಭದಲ್ಲಿ ಜೈನ್ ಧರ್ಮವೆಂದು ಮಾತ್ರ ಬರೆಸಬೇಕು, ಹಿಂದು ಎಂಬ ಪದ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ರಾಷ್ಟ್ರಸಂತ, ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಸೂಚಿಸಿದ್ದಾರೆ.

ತಮ್ಮನೇತೃತ್ವದಲ್ಲಿ ಎಲ್ಲ ಜೈನ್ ಮಠಗಳ ಭಟ್ಟಾರಕರು, ಸಮಾಜದ ಪ್ರಮುಖರ ಜೂಮ್ ಮೀಟಿಂಗ್ ನಂತರ ಅವರು ಈ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಜೈನ್ ಧರ್ಮ ಎಂದು ಮಾತ್ರ ಬರೆಸುವಂತೆ ಒಕ್ಕೋರಲಿನ ನಿರ್ಣಯ ಕೈಗೊಳ್ಳಾಯಿತು. ಗಣತಿಯಲ್ಲಿ ಕೆಲವು ಗೊಂದಲ ಇವೆ. ಸರ್ಕಾರದಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಮಾಜದ ನಿಯೋಗ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ಕೇಳಲಿದೆ. ಹಾಗಾಗಿ ಜೈನರು ಸೆ. 22ರ ಬದಲು ಸೆ. 23ರಿಂದ ಗಣತಿ ವಿವರ ನೀಡಬೇಕು ಎಂದು ಮಹಾರಾಜರು ಸಲಹೆ ನೀಡಿದ್ದಾರೆ.

ಸರ್ಕಾರ ಜೈನ ಗ್ರಂಥ ನಿರ್ಮಿಸಿರುವುದು ಸ್ವಾಗತಾರ್ಹ. ಆದರೆ, ಹಲವಾರು ಗೊಂದಲಗಳು ಇವೆ. ಜೈನ ಸಮಾಜಕ್ಕೆ ಸಂಬಂಧ ಇಲ್ಲದ ಕೆಲವು ಜಾತಿಗಳೂ ಇದರಲ್ಲಿ ಸೇರಿವೆ. ಅವುಗಳನ್ನು ತೆಗೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಜಾತಿ ಗಣತಿಯ ಕೊನೇ ದಿನವನ್ನು ಸ್ವಲ್ಪ ಮುಂದೂಡುವಂತೆ ಮನವಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net