

ಸಾಗರ: ಸರ್ಕಾರ ಜನರ ಒಳಿತಿಗಾಗಿ ಸಾಕಷ್ಟು ಭಾಗ್ಯಗಳನ್ನು ಕೊಟ್ಟಿದೆ. ಆದರೆ ನಮ್ಮ ಮೇಲೆ ಅಸಮರ್ಪಕ ತೆರಿಗೆಯನ್ನು ಹೇರಿ ದುರ್ಭಾಗ್ಯರನ್ನಾಗಿ ಮಾಡಬೇಡಿ ಎಂದು ಲಘು ಸಾರಿಗೆ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಮುಖ್ಯಸ್ಥ ಐ.ವಿ.ಹೆಗಡೆ ಹೇಳಿದರು.
ನಗರದಲ್ಲಿ ಲಘು ಸಾರಿಗೆ ವಾಹನ ಮಾಲೀಕರು ಮತ್ತು ಚಾಲಕರ ಸಂಘ ವಾಹನಗಳ ಮೇಲೆ ಇತ್ತೀಚೆಗೆ ಹೇರಲಾದ ಅಸಮರ್ಪಕ ತೆರಿಗೆಯನ್ನು ಹಿಂಪಡೆಯುವAತೆ ಒತ್ತಾಯಿಸಿ ಉಪವಿಭಾಗಾಽಕಾರಿಗಳಿಗೆ ಸೋಮವಾರ ಮನವಿ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಸರಕು ಸಾಗಣೆ ಮತ್ತು ಇತರ ವಾಹನಗಳ ಮೇಲೆ ಹೇರಲಾದ ತೆರಿಗೆ ಪದ್ಧತಿಯು ಹೊರಲಾಗದ ಹೊರೆಯಾಗಿ ಪರಿಣಮಿಸಿದೆ. ಒಂದಕ್ಕೆ ಮೂರು ಪಟ್ಟು ತೆರಿಗೆ ವಿಽಸಿದ್ದಾರೆ. ಅನಿಶ್ಚಿತ ಮಾರುಕಟ್ಟೆ ಕಾಲಮಾನ ನಮ್ಮ ವ್ಯವಹಾರವನ್ನು ಪಾತಾಳಕ್ಕಿ ತಲುಪಿಸಿದೆ. ಈಗಿನ ತೆರಿಗೆ ಪದ್ಧತಿ ಗಾಯದ ಮೇಲೆ ಬರೆಯಿಟ್ಟಂತಾಗಿದೆ. ಸರ್ಕಾರ ಕೂಡಲೆ ಹೊಸ ತೆರಿಗೆ ಪದ್ಧತಿಯನ್ನು ಹಿಂಪಡೆದು ಹಿಂದಿನ ಪದ್ಧತಿಯನ್ನು ಮರು ಜಾರಿಗೊಳಿಸಬೇಕು. ಈ ಕುರಿತು ಕ್ಷೇತ್ರದ ಶಾಸಕರಿಗೂ ನಮ್ಮ ಸಮಸ್ಯೆಯನ್ನು ವಿವರಿಸಿ ಮನವಿ ಸಲ್ಲಿಸಲಾಗುವುದು ಎಂದು ಆಗ್ರಹಿಸಿದರು.
ಸಂಘಟನೆಯ ನೇತೃತ್ವ ವಹಿಸಿದ್ದ ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಇತರ ಸಾರಿಗೆಗಿಂತಲೂ ಭೂ ಸಾರಿಗೆ ವ್ಯವಸ್ಥೆ ಪ್ರಮುಖವಾದುದು. ನಮ್ಮಂತಹ ಲಘು ಸಾರಿಗೆ ವಾಹನ ನಡೆಸುವವರಿಗೆ ಬೇಕಾಬಿಟ್ಟಿ ತೆರಿಗೆ ಹೇರಿದರೆ ಬದುಕು ನಡೆಸಲು ಸಾಧ್ಯವಾಗದೆ ರಸ್ತೆಗೆ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಅಸಮರ್ಪಕ ಮತ್ತು ಅವೈಜ್ಞಾನಿಕ ತೆರಿಗೆಯನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಶಾಂತ್, ಸತ್ಯನಾರಾಯಣ್, ಗೋಪಾಲ್, ಪ್ರಕಾಶ್ ಕಾಮತ್, ರವಿ, ಬಸವರಾಜ್ ಇತರರಿದ್ದರು.