

ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇತರೆ ಇರುವ ಕಡೆ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಮತ್ತು ಉಪ ಜಾತಿ ಕಾಲಂನಲ್ಲಿ ತಮ್ಮ ಉಪ ಜಾತಿಗಳನ್ನು ನಮೂದಿಸಬೇಕು ಎಂದು ಲಿಂಗಾಯತ ಅಲ್ಪಸಂಖ್ಯಾತರ ಮಾನ್ಯತೆಗಾಗಿ ಹೋರಾಟ ವೇದಿಕೆಯ ಅಧ್ಯಕ್ಷ ಚಿಂತಾಮಣಿ ಸಿಂದಗಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮಾಜದಲ್ಲಿ 104 ಒಳಗಪಂಗಡಗಳಿವೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸುವುದರಿಂದ ಮುಂದೆ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಪಡೆಯಲು ಸಹಕಾರಿಯಾಗಲಿದೆ ಎಂದರು.</p><p>ಧರ್ಮದ ಕಾಲಂನಲ್ಲಿ ಹಿಂದು ಎಂದು ಬರೆಸಿದರೆ ನಾವು ಶೂದ್ರರಾಗುತ್ತೇವೆ. ಅದರಿಂದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಹೀಗಾಗಿ, ಯಾರೂ ಆ ರೀತಿ ನಮೂದಿಸಬಾರದು ಎಂದು ಮನವಿ ಮಾಡಿದರು.
ಲಿಂಗಾಯತ ಎಂದು ಬರೆಸುವಂತೆ ಪಂಚಮಸಾಲಿ ಸಮಾಜದ ಸ್ವಾಮೀಜಿಗಳು ಈ ಹಿಂದೆ ಒಪ್ಪಿಕೊಂಡಿದ್ದರು. ಈಗ ನಿಲುವು ಬದಲಿಸಿರುವುದರ ಹಿಂದೆ ಯಾರ ಒತ್ತಡ ಇದೆ ಎಂಬುದು ಗೊತ್ತಿಲ್ಲ. ಈಗ ರಾಜಕಾರಣಿಗಳು ಹೇಳಿದಂತೆ ಸ್ವಾಮೀಜಿಗಳು ಕೇಳುತ್ತಿದ್ದಾರೆ. ಅದನ್ನೇ ಭಕ್ತರು ಕೇಳಬೇಕು ಎಂಬ ಒತ್ತಡ ಹಾಕಲಾಗುತ್ತಿದೆ ಎಂದರು.
ಶಿವುಯೋಗಪ್ಪ ಯಮ್ಮಿ, ಡಿ.ಸಿ.ರಂಗರೆಡ್ಡಿ, ಮಲ್ಲಿಕಾರ್ಜುನ ಕುಂಬಾರ, ಗಂಗಾಧರ ಗಂಜಿ, ರವಿ ಕುಡುವಕ್ಕಲಿಗೇರ ಸುದ್ದಿಗೋಷ್ಠಿಯಲ್ಲಿ ಇದ್ದರು.