ಜಾತಿಗಣತಿಯಲ್ಲಿ ಕುಂಚಿಟಿಗ ಎಂದೇ ಬರೆಸಿ

FotoJet 2 24
Published on

ಎಲೆರಾಂಪುರದ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಸಲಹೆ

ದೊಡ್ಡಬಳ್ಳಾಪುರ : ಸಮಾಜ ಕಟ್ಟುವ ಕೆಲಸ ಸುಲಭದ ಕೆಲಸವಲ್ಲ. ನಮ್ಮ ಕುಂಚಿಟಿಗ ಸಮುದಾಯ ಸಂಟನೆಯಾದರೆ ಮುಂದಿನ ಪೀಳಿಗೆ ಸದೃಢವಾಗುತ್ತದೆ. ಈ ಹಿಂದೆ ಹತ್ತಾರು ಜನ ಶಾಸಕರು, ಸಂಸದರಿದ್ದ ನಮ್ಮ ಸಮುದಾಯ ಇಂದಿಗೆ ಎರಡಂಕಿಗೆ ಇಳಿದಿದೆ ಎಂದು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಶನಿವಾರ ತಾಲೂಕು ಕುಂಚಿಟಿಗರ ನೌಕರರ ಸಂದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸಮುದಾಯದ ಸಂಟನೆ ಕೆಲಸ ಕುಂಠಿತವಾಗುತ್ತಿದೆ. ನಮ್ಮ ಸಮಾಜದ ಜನರಿಗೆ ಯಾವುದೇ ದೌರ್ಜನ್ಯ, ಸಮಸ್ಯೆಯಾದರೂ ನಾನು ಸದಾ ರಕ್ಷಣೆಗೆ ಇರುತ್ತೇನೆ. ಇಂದಿನ ಸಮಾಜದಲ್ಲಿ ಹಣಬಲ, ಜಾತಿಬಲ ಇದ್ದರೆ ಮಾತ್ರ ಬದುಕಲು ಸಾಧ್ಯ. ಮುಂದಿನ ದಿನಗಳಲ್ಲಿ ನಡೆಯುವ ಜಾತಿಗಣತಿಯಲ್ಲಿ ಪ್ರತಿಯೊಬ್ಬರೂ ಕುಂಚಿಟಿಗ ಎಂದು ನಮೂದಿಸಬೇಕು. ಕುಂಚಿಟಿಗ ಎಂದು ಬರೆಸಿದರೆ ಒಬಿಸಿ ಎಂದು ಗುರುತಿಸಲಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಭರವಸೆ ನೀಡಿದೆ. ಸಮುದಾಯದ ಮುಖಂಡರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ಕುಂಚಿಟಿಗರು ಸಂಕುಚಿತ ಮನೋಭಾವನೆಯಿಂದ ಹೊರಬರಬೇಕು. ಸಮಾಜದ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ನಮ್ಮ ಮಠಕ್ಕೆ ಕರೆದುಕೊಂಡು ಬಂದರೆ ಉತ್ತಮ ವಿದ್ಯಾಭ್ಯಾಸ ಮಾಡಿಸಲಾಗುತ್ತದೆ ಎಂದರು.

ನಗರಸಭಾ ಮಾಜಿ ಸದಸ್ಯ ಕೆಂಪರಾಜು ಮಾತನಾಡಿ, ಸಮಾಜದ ಸಭಾ ಭವನ ನಿರ್ಮಾಣ ಮಾಡಲು ತಾಲೂಕು ಟಕದಿಂದ ಶ್ರಮವಹಿಸಲಾಗುವುದು. ಸಮಾಜದ ಮುಖಂಡರು ಸಹಕರಿಸಬೇಕು ಎಂದರು.

ಇದೇ ವೇಳೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net