ಕೈಗಡಿ ಭಾಗದ ಸಂಪರ್ಕ ಕಡಿತ

20 ylp 03 a (gangavali)
Published on

ಯಲ್ಲಾಪುರ: ತಾಲೂಕಿನಲ್ಲಿ ಒಂದು ವಾರದಿಂದ ಅಬ್ಬರಿಸುತ್ತಿರುವ ಮಳೆ ಬುಧವಾರವೂ ಮುಂದುವರಿದೆ. ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ತೋಟಗಳಿಗೆ ನುಗ್ಗಿ ನಷ್ಟ ಉಂಟಾಗಿದೆ.

ವ್ಯಾಪಕ ಮಳೆಯಿಂದ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಅರಬೈಲ್ ಸಮೀಪದ ಫಣಸಗುಳಿ ತಾತ್ಕಾಲಿಕ ಸೇತುವೆಯ ಮೇಲೆ ನೀರು ಹರಿಯುತ್ತಿರುವುದರಿಂದ ಕೈಗಡಿ ಭಾಗಕ್ಕೆ ಸಂಪರ್ಕ ಕಡಿತಗೊಂಡಿದೆ. ಗುಳ್ಳಾಪುರದಲ್ಲಿ ಕುಸಿದ ಸೇತುವೆಯ ಸಮನಾಗಿ ನೀರು ಹರಿಯುತ್ತಿದೆ. ಮಳೆಯಿಂದಾಗಿ ಆನಗೋಡ ಗ್ರಾಪಂ ವ್ಯಾಪ್ತಿಯ ಸಾವಗದ್ದೆ ಗ್ರಾಮದ ಕಾರೆಮನೆಯ ರಾಮಕೃಷ್ಣ ಭಟ್ಟ ಅವರ ತೋಟದ ಹತ್ತಿರ ಬಾಂದಾರ ಒಡೆದಿದೆ. ತೋಟಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ತೋಟದಲ್ಲಿ ಅಡಕೆ ಗಿಡಗಳು, ತೋಟಕ್ಕೆ ಹಾಕಿದ ಗೊಬ್ಬರ ಕೊಚ್ಚಿಕೊಂಡು ಹೋಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net