ಕುಸ್ತಿ ಪಂದ್ಯಾವಳಿ ಪೂರ್ವಭಾವಿ ಸಭೆ

ಸಭೆ
Published on

ಕಲಕೇರಿ: ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ 2024&25 ನೇ ಸಾಲಿನ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯ ಪೂರ್ವಭಾವಿ ಸಭೆ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಎ.ಕೆ.ಸಿರಸಗಿ ಪದವಿಪೂರ್ವ ಕಾಲೇಜಿನಲ್ಲಿ ಸೆ.14 ರಂದು ಬೆಳಗ್ಗೆ 11.30 ಗಂಟೆಗೆ ಕರೆಯಲಾಗಿದೆ.

ಸದರಿ ಸಭೆಗೆ ವಿಜಯಪುರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಮ್ಮ ಕಾಲೇಜಿನ ಕುಸ್ತಿಪಟುಗಳ ಯಾದಿ ಸಮೇತ ತಮ್ಮ ಕಾಲೇಜಿನ ದೈಹಿಕ ಉಪನ್ಯಾಸಕರ ಜೋತೆಗೂಡಿ ಪೂರ್ವಭಾವಿ ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಗಳ ಸಂಚಾಲಕ ಶಾಂತು ಧುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net