ಮೈಸೂರಿನಲ್ಲಿ ಮೇ 24, 25 ರಂದು ಕುಸ್ತಿ ಪಂದ್ಯಾವಳಿ

14cnhalli kusthi
Published on

ಮೈಸೂರು: ಜಿಲ್ಲಾ ಕುಸ್ತಿ ಸಂಘದ ವತಿಯಿಂದ ಮೇ 24, 25ರಂದು ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ 15 ಜಿಲ್ಲೆಗಳ ಹಿರಿಂುರ, ಕಿರಿಂು, ಬಾಲಕ, ಬಾಲಕಿಂುರ ಪಾಯಿಂಟ್ ಕುಸ್ತಿ ಪಂದ್ಯಾವಳಿ ಆಂೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಸ್ಟಾರ್ ವೆಂಕಟೇಶ್ ತಿಳಿಸಿದರು.

ಈ ಪಾಯಿಂಟ್ ಕುಸ್ತಿ ಪಂದ್ಯಾವಳಿಂುಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಬೆಂಗಳೂರು, ರಾಮನಗರ, ಮಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಉಡುಪಿ, ಕೊಡಗು, ಕೋಲಾರ ಜಿಲ್ಲೆಗಳ ಕುಸ್ತಿಪಟುಗಳಿಗೆ ವಾತ್ರ ಅವಕಾಶವಿರುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಂುಲ್ಲಿ ಮಾಹಿತಿ ನೀಡಿದರು.

ಪಾಯಿಂಟ್ ಕುಸ್ತಿಪಂದ್ಯಾವಳಿಂು ವಿವಿಧ ವಂೋವಾನ ಹಾಗೂ ತೂಕ ವಿಭಾಗದ ಕುಸ್ತಿಪಟುಗಳಿಗೆ ಬಾಲ ಕಿಶೋರ ಪ್ರಶಸ್ತಿ, ಬಾಲ ಕೇಸರಿ ಪ್ರಶಸ್ತಿ, ಮೈಸೂರು ಂುುವರಾಜ ಪ್ರಶಸ್ತಿ, ಮೈಸೂರು ಒಡೆಂುರ್ ಪ್ರಶಸ್ತಿ, ಮೈಸೂರು ಮೇಂುರ್ ಪ್ರಶಸ್ತಿ, ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಂುರ್ ಪ್ರಶಸ್ತಿ, ಮೈಸೂರು ಂುುವರಾಣಿ ಪ್ರಶಸ್ತಿ, ಮೈಸೂರು ಮಹಾರಾಣಿ ಪ್ರಶಸ್ತಿ, ಮೈಸೂರು ಕಿಶೋರ ಪ್ರಶಸ್ತಿ, ಮೈಸೂರು ಕುವಾರ್ ಪ್ರಶಸ್ತಿ, ಮೈಸೂರು ಕೇಸರಿ ಪ್ರಶಸ್ತಿ, ಮೈಸೂರು ಕಂಠೀರವ ಪ್ರಶಸ್ತಿ, ಶ್ರೀ ನಾರಾಂುಣಪ್ಪ ಇಟ್ಟಿಗೆಗೂಡು ಪ್ರಶಸ್ತಿ, ಮೈಸೂರು ಹುಲಿ ಪ್ರಶಸ್ತಿಗಳ ಜತೆ ತಲಾ ನಾಲ್ಕು ನಗದು ಬಹುವಾನಗಳನ್ನು ನೀಡಲಾಗುವುದು ಎಂದು ಹೇಳಿದರು.

ಪಾಯಿಂಟ್ ಕುಸ್ತಿ ಅಲ್ಲದೇ ಮೇ 25ರಂದು 10 ಜತೆ ನಾಡ ಕುಸ್ತಿಗಳನ್ನು ಆಂೋಜಿಸಲಾಗಿದೆ. ಇದರಲ್ಲಿ ಪೈಲ್ವಾನ್ ಸಂ್ಯುದ್ ಹುಸೇನ್ ಮತ್ತು ಪೈಲ್ವಾನ್ ರವಿಚಂದ್ರ ನಡುವೆ ವಾರ್ಫಿಟ್ ಕುಸ್ತಿ ನಡೆಂುಲಿದೆ ಎಂದು ತಿಳಿಸಿದರು.

ನಾಡ ಕುಸ್ತಿ ಸ್ಪರ್ಧೆಂುಲ್ಲಿ ಗೆದ್ದವರಿಗೆ ಪೈ.ಚಿಕ್ಕರಂಗಣ್ಣ ಪ್ರಶಸ್ತಿ, ತೋಡೆವಾಲ ಪೈ. ಸಾಬುಲಾಲ್ ಪ್ರಶಸ್ತಿ, ಉಸ್ತಾದ್ ಕುಳ್ಳ ಮಹದೇವಣ್ಣ ಪ್ರಶಸ್ತಿ, ದಿಲ್‌ದಾರ್ ಪೈ. ರಿಂಾಜ್ ಪ್ರಶಸ್ತಿ, ಪೈ. ಕೃಷ್ಣಪ್ಪ ಪ್ರಶಸ್ತಿ, ದಿ.ನೀಲಕಂಠಣ್ಣ ಪ್ರಶಸ್ತಿಂುನ್ನು ನೀಡಿ ಗೌರವಿಸಲಾಗುವುದು ಎಂದು ವಾಹಿತಿ ನೀಡಿದರು.

ನಾಡ ಕುಸ್ತಿ ಕ್ರೀಡೆಂು ಹಿರಿಂು 4 ಸಾಧಕರಾದ ಶ್ರೀರಂಗಪಟ್ಟಣ ಪೈ.ಶ್ರೀಕಂಠು, ಗಂಜಾಂ ಪೈ. ಶಂಕರ್ ಜಾನಿ, ಮಂಡಿಮೊಹಲ್ಲಾ ಪೈ. ಚೋಟಾ ಚಮನ್, ಇಟ್ಟಿಗೆಗೂಡು ಪೈ. ಜಂುರಾಮ್ ಅವರನ್ನು ಸನ್ಮಾನಿಸಲಾಗುವುದು ಎಂದು. ವಾಹಿತಿಗಾಗಿ 9900325363 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಛೋಟಾ ರಫೀಕ್, ರಾಜಶೇಖರ, ಬಸವರಾಜು, ಚಂದ್ರಶೇಖರ್, ಗಿರೀಶ್ ನಕ್ಷತ್ರ, ರಾಣಿ ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net