ಮಲ್ಲಿಕಾರ್ಜುನ ಜಾತ್ರೆಯಲ್ಲಿ ಗಮನ ಸೆಳೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ

IMG-20221028-WA0012
ಬನಹಟ್ಟಿಯಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ನಿಮಿತ್ತ ನಡೆದ ಜಂಗಿ ನಿಕಾಲಿ ಕುಸ್ತಿ ಆಟದಲ್ಲಿ ಸೆಣಸಾಡುತ್ತಿರುವ ಕುಸ್ತಿಪಟುಗಳು.
Published on

ರಬಕವಿ/ಬನಹಟ್ಟಿ : ಬನಹಟ್ಟಿಯ ಶ್ರೀ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಗುರುವಾರ ಅದ್ದೂರಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆದವು. ಹಿರಿಯ ಕಾಡಪ್ಪ ಜಿಡ್ಡಿಮನಿ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ಸೋಮವಾರ ಪೇಟೆ ಸಮಸ್ತ ದೈವ ಮಂಡಳದ ಚೇರ್ಮನ್ ಮಲ್ಲಿಕಾರ್ಜುನ ತುಂಗಳ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
70ಕ್ಕೂ ಹೆಚ್ಚು ಕುಸ್ತಿ ಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್‌ಗಳನ್ನು ಹಾಕಿ ಕುಸ್ತಿಯಾಡಿ ನೆರೆದ ಜನರನ್ನು ರಂಜಿಸಿದರು. ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರ ಹರಿದು ಬಂದಿತ್ತು.

ಶಾಸಕ ಸಿದ್ದು ಸವದಿ, ಅಂಬಾದಾಸ ಕಾಮೂರ್ತಿ, ಸಿದ್ದು ಕೊಣ್ಣೂರ, ಸಿದ್ದನಗೌಡ ಪಾಟೀಲ, ರಾಮಣ್ಣ ಭದ್ರನ್ನವರ, ಮಹಾಶಾಂತ ಶೆಟ್ಟಿ, ಸಿದ್ರಾಮಪ್ಪ ಸವದತ್ತಿ, ಶಂಕರ ಜಾಲಿಗಿಡದ, ಶಿವಾನಂದ ಬಾಗೇವಾಡಿ, ಮಲ್ಲಣ್ಣ ಕಕಮರಿ, ಮಂಗಳವಾರ ಪೇಟೆ ದೈವ ಮಂಡಳದ ಶ್ರೀಪಾದ ಬಾಣಕಾರ, ಪಂಡಿತ ಪಟ್ಟಣ, ಭೀಮಶಿ ಪಾಟೀಲ, ಮಲ್ಲಿಕಾರ್ಜುನ ಬಾವಲತ್ತಿ, ಗಂಗಪ್ಪ ಹಾದಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net