

ಬೀದರ್: ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ನ. 11 ಮತ್ತು 12 ರಂದು ನಾಲ್ಕನೇ ಜಾತ್ರಾ ಮಹೋತ್ಸವ ನಡೆಯಲಿದೆ.
11 ರಂದು ಬೆಳಿಗ್ಗೆ 6.30ಕ್ಕೆ ಕುಂಭ ಮೇಳ, ಬೆಳಿಗ್ಗೆ 9ಕ್ಕೆ ನೌಬಾದ್‍ನ ಜ್ಞಾನಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ಲಕ್ಷ ಪುಷ್ಪಾರ್ಚನೆ ಜರುಗಲಿದೆ.
ಸಂಜೆ 4ಕ್ಕೆ ಹನುಮಾನ ಮಂದಿರದಿಂದ ಭವಾನಿ ಮಂದಿರದ ವರೆಗೆ ಕಾಶಿ ಜಗದ್ಗುರು ಡಾ. ರಾಜಶೇಖರ ಶಿವಾಚಾರ್ಯರ ಭವ್ಯ ಮೆರವಣಿಗೆ, ಸಂಜೆ 7.30ಕ್ಕೆ ಧರ್ಮ ಸಮ್ಮೇಳನ ನಡೆಯಲಿದೆ.
ನ. 12 ರಂದು ಬೆಳಿಗ್ಗೆ 6.30ಕ್ಕೆ ನಡೆಯುವ ಭವಾನಿ ಮಾತೆಯ ವೈಭವದ ಪಲ್ಲಕ್ಕಿ ಮೆರವಣಿಗೆಗೆ ಕಾಶಿ ಜಗದ್ಗುರು ಡಾ. ರಾಜಶೇಖರ ಶಿವಾಚಾರ್ಯರು ಚಾಲನೆ ನೀಡುವರು.
ಮಧ್ಯಾಹ್ನ 2ಕ್ಕೆ ಜಂಗಿ ಕುಸ್ತಿ ಹಾಗೂ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಜರುಗಲಿದೆ ಎಂದು ಭವಾನಿ ಮಾತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ದತ್ತಾತ್ರಿ ಲಕ್ಕಾ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕಾಶಿನಾಥ ಗೌರಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಚನ್ನು ಗೌರಶೆಟ್ಟಿ ತಿಳಿಸಿದ್ದಾರೆ.