ಐಎಎಸ್ ಅಧಿಕಾರಿ ಗ್ರಾಪಂ ಪಿಡಿಒ !

Ramya sanman - Copy
Published on

ಬೀದರ್: ಐಎಎಸ್ ಅಧಿಕಾರಿ ರಮ್ಯಾ ಅವರು ತಾಲೂಕಿನ ಮರಕಲ್ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಆಗಿ ಶುಕ್ರವಾರ ಅಕಾರ ವಹಿಸಿಕೊಂಡರು.

ರಮ್ಯಾ ಅವರು ಕಳೆದ ಕೆಲ ತಿಂಗಳಿನಿಂದ ಜಿಲ್ಲೆಯಲ್ಲಿ ಪ್ರೊಬೇಷನರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಪ್ರೊಬೇಷನರಿ ಅವಧಿಯಲ್ಲಿ ಪ್ರತಿಯೊಂದು ಇಲಾಖೆಯ ಕಾರ್ಯನಿರ್ವಹಣೆ ಹೇಗಿರುತ್ತದೆ ಎನ್ನುವ ಕುರಿತು ತರಬೇತಿ ಸಂಬಂಧ ಅಧಿಕಾರ ವಹಿಸಿಕೊಳ್ಳುತ್ತಾರೆ. ಅದರಂತೆ ಮರಕಲ್ ಪ್ರಭಾರ ಪಿಡಿಒ ಆಗಿ ರಮ್ಯಾ ಅವರು ಒಂದು ವಾರ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net