ಬೈಕ್ ಸವಾರರಿಗೆ ಹೆಲ್ಮೇಟ್ ಉಚಿತ ವಿತರಣೆ

Helmet Distribution At Humnabad CPI Office
Published on

ಬೀದರ್: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೂ ಆದ ಯುವ ಕ್ರಾಂತಿ ಸಂಘಟನೆಯ ರಾಜ್ಯ ಅಧ್ಯಕ್ಷ ಗುಂಡುರೆಡ್ಡಿ ಅವರ ಜನ್ಮದಿನದ ನಿಮಿತ್ತ ಯುವ ಕ್ರಾಂತಿ ಸಂಘಟನೆ ವತಿಯಿಂದ ಈಚೆಗೆ ಹೆಲ್ಮೇಟ್ ಉಚಿತ ವಿತರಣೆ, ರಕ್ತದಾನ ಶಿಬಿರ ನಡೆದವು.

ಹುಮನಾಬಾದ್ ಪಟ್ಟಣದ ಸಿಪಿಐ ಕಚೇರಿಯಲ್ಲಿ 100 ಬೈಕ್ ಸವಾರರಿಗೆ ಹೆಲ್ಮೇಟ್ ವಿತರಿಸಲಾಯಿತು. ಬಸವಕಲ್ಯಾಣ ತಾಲ್ಲೂಕಿನ ಹಣಮಂತವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 47 ಮಂದಿ ರಕ್ತದಾನ ಮಾಡಿದರು.

ಯುವ ಕ್ರಾಂತಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಭೂರೆ, ಪ್ರಮುಖರಾದ ಮಲ್ಲಿಕನಾಥ ಮಡಗೆ, ರಾಜು ದುಬಲಗುಂಡಿ, ಪರಮೇಶ್, ಪಪ್ಪುರಾಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net