ಬ್ರಿಮ್ಸ್ ವಸತಿ ಗೃಹ ಸುತ್ತಲಿನ ಒತ್ತುವರಿ ತೆರವು

Brims
Published on

ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯಲ್ಲಿನ ವಸತಿ ಗೃಹಗಳ ವ್ಯಾಪ್ತಿಯಲ್ಲಿ ಬರುವ ಜಾಗದಲ್ಲಿ ಕೆಲ ಅಪರಿಚಿತರು ಭಾನುವಾರ ರಾತ್ರಿ ಮೂರು ಅಡಿ ಎತ್ತರದ ಗೋಡೆ ಕಟ್ಟಿ, ಟಿನ್ ಶೆಡ್ ಅಳವಡಿಸಿ ಒತ್ತುವರಿ ಮಾಡಿದ್ದನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಸಹಾಯಕ ಆಯುಕ್ತ ಮಹ್ಮದ್ ಶಕೀಲ್ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ವೀಕ್ಷಿಸಿದರು. ಒತ್ತುವರಿ ಕುರಿತು ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶೆಟಕಾರ್ ಅವರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಪತ್ರ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಕ್ರಮ ಕೈಗೊಂಡರು. ಒತ್ತುವರಿ ಮಾಡಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ತೆರವು ಕಾರ್ಯಾಚರಣೆ ವೇಳೆ ಯಾರು ಸಹ ಸ್ಥಳಕ್ಕೆ ಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net