ಕ್ರೀಡಾಪಟುಗಳ ಉತ್ಸಾಹ

Hulsoor Taluka Level Sports Photo - Copy
Published on

ಬೀದರ್: ಮೇರಾ ಯುವ ಭಾರತ್, ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆ ವತಿಯಿಂದ ಹುಲಸೂರಿನಲ್ಲಿ ಈಚೆಗೆ ನಡೆದ ಎರಡು ದಿನಗಳ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಭಾಗಿಯಾದರು.

ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.

ಕಬಡ್ಡಿ ಸ್ಪರ್ಧೆಯಲ್ಲಿ ಹುಲಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವತಿಯರ ತಂಡ, ವಾಲಿಬಾಲ್ ಸ್ಪರ್ಧೆಯಲ್ಲಿ ಭಗತ್‍ಸಿಂಗ್ ಯುವಕ ಸಂಘದ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆಯಾದವು.

ಯುವಕರ ವಿಭಾಗದ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ವಿದ್ಯಾಜ್ಯೋತಿ ಶಾಲೆಯ ನಂದನ್ (ಪ್ರಥಮ), ಅನೀಶ್ (ದ್ವಿತೀಯ), ವೈಭವ (ತೃತೀಯ), ವೇಟ್ ಲಿಫ್ಟಿಂಗ್‍ನಲ್ಲಿ ಅಫ್ರೋಜ್ (ಪ್ರಥಮ), ಹರ್ಷ (ದ್ವಿತೀಯ) ಮತ್ತು ನಾಗೇಶ (ತೃತೀಯ) ಸ್ಥಾನ ಪಡೆದರು.

ಬಾಲಕಿಯರ ವಿಭಾಗದ 100 ಮೀ. ಓಟದಲ್ಲಿ ಸೌಂದರ್ಯ (ಪ್ರಥಮ), ಸೃಷ್ಟಿ, ಸಾಕ್ಷಿ (ದ್ವಿತೀಯ), ವಿಜಯಲಕ್ಷ್ಮಿ (ತೃತೀಯ), ಸ್ಲೋ ಸೈಕ್ಲಿಂಗ್‍ನಲ್ಲಿ ಶ್ರದ್ಧಾ ಬಸವರಾಜ (ಪ್ರಥಮ), ದೀಪಾಲಿ (ದ್ವಿತೀಯ) ಹಾಗೂ ಸಂಧ್ಯಾರಾಣಿ (ತೃತೀಯ) ಸ್ಥಾನ ಗಳಿಸಿದರು.

ತಹಶೀಲ್ದಾರ್ ಶಿವಾನಂದ ಮೇತ್ರೆ ಉದ್ಘಾಟಿಸಿದರು. ಮೇರಾ ಯುವ ಭಾರತ್ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಸುಧಾಕರ ಬಿರಾದಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಕಾಂಬಳೆ, ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಿ ಗೀತಾ, ಪ್ರಾಚಾರ್ಯೆ ಮೇಬಲ್, ದೈಹಿಕ ಶಿಕ್ಷಕ ಅರವಿಂದ್ ಕುಂಬಾರ, ಮೇರಾ ಯುವ ಭಾರತ್‍ನ ಸೋಮನಾಥ ಪೂಜಾರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net