ನ. 5 ರಿಂದ ಟಿಇಟಿ ಉಚಿತ ತರಬೇತಿ

Published on

ಬೀದರ್: ಕಲ್ಪವೃಕ್ಷ ಸಹಯೋಗದಲ್ಲಿ ಇಲ್ಲಿಯ ನೀಲಗಿರಿ ಇನ್‍ಸ್ಟಿಟ್ಯೂಟ್ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗಲು ಒಂದು ತಿಂಗಳ ಉಚಿತ ತರಬೇತಿ ಹಮ್ಮಿಕೊಂಡಿದೆ.

ನೀಲಗಿರಿ ಇನ್‍ಸ್ಟಿಟ್ಯೂಟ್‍ನ ನಗರದ ಮೋಹನ್ ಮಾರ್ಕೇಟ್ ಮುಖ್ಯ ಶಾಖೆ ಹಾಗೂ ರಾಮಚೌಕ್ ಸಮೀಪದ ಶಾಖೆಯಲ್ಲಿ ನವೆಂಬರ್ 5 ರಿಂದ ಡಿಸೆಂಬರ್ 5 ರ ವರೆಗೆ ತರಬೇತಿ ನಡೆಯಲಿದೆ ಎಂದು ನೀಲಗಿರಿ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಸಾವಂತ ಸಾಗರ್ ತಿಳಿಸಿದ್ದಾರೆ.

ವಿವಿಧ ವಿಷಯಗಳ ನುರಿತ, ಅನುಭವಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ತರಬೇತಿಗೆ ಹೆಸರು ನೋಂದಣಿಗೆ ನವೆಂಬರ್ 2 ಕೊನೆಯ ದಿನವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net