

ಕಮಲನಗರ: ಆರೇಳು ದಶಕ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿ ಒಂದೇ ದಿನ ಸಾವಿಗೀಡಾದ ಘಟನೆ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಡೆದಿದೆ. ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ಸಾವಿನಲ್ಲೂ ಒಂದಾದ ದಂಪತಿ. ಇಬ್ಬರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊದಲು ಲಕ್ಷ್ಮೀಬಾಯಿ ಹೋಡಗೆ ಅವರು ಶುಕ್ರವಾರ ಸಂಜೆ ನಿಧನ ಹೊಂದಿದರು. ಮೂರು ಗಂಟೆ ನಂತರ ಗುಂಡಪ್ಪ ಹೋಡಗೆ ಸಹ ಕೊನೆಯುಸಿರೆಳೆದರು. ದಂಪತಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರಿದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಯಿತು.