ಕನ್ಹೇರಿ ಶ್ರೀ ಬಂಧನಕ್ಕೆ ಆಗ್ರಹ

pressmeet photo
Published on

ಬೀದರ್: ಬಸವ ಸಂಸ್ಕೃತಿ ಅಭಿಯಾನದ ಪೂಜ್ಯರ ಕುರಿತು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿ ಅವರು ಬಾಯಿಗೆ ಬಂದಂತೆ ಬೈದಿರುವುದು ಖಂಡಿಸಲಾಗುವುದು. ಸರ್ಕಾರ ಕೂಡಲೇ ಕನ್ಹೇರಿ ಶ್ರೀ ವಿರುದ್ಧ ಕೇಸ್ ದಾಖಲಿಸಿಕೊಂಡು ಅವರನ್ನು ಬಂಧಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಕಾರ್ಯದರ್ಶಿ ಕಿರಣ ಖಂಡ್ರೆ ಆಗ್ರಹಿಸಿದ್ದಾರೆ.

ಬಸವ ಸಂಸ್ಕೃತಿ ಅಭಿಯಾನ ಮುಖ್ಯಮಂತ್ರಿಗಳ ಕೃಪಾಪೋಷಿತ ಕಾರ್ಯಕ್ರಮ ಸೇರಿದಂತೆ ಲಿಂಗಾಯತ ಮಠಾಧೀಶರ ವಿರುದ್ದ ಕೆಟ್ಟ ಪದಗಳನ್ನು ಬಳಸಿ ಕನ್ಹೇರಿ ಶ್ರೀ ಮಾತನಾಡಿದ್ದಾರೆ. ನಮ್ಮದು ಸಿಎಂ ಕೃಪಾಪೋಷಿತ ಅಭಿಯಾನ ಅಲ್ಲ. ಅದು ವಿಶ್ವಗುರು ಬಸವೇಶ್ವರರ ಕೃಪಾಪೋಷಿತ, ಲಿಂಗಾನಂದ ಸ್ವಾಮಿಗಳ ಮತ್ತು ಮಾತೆ ಮಹಾದೇವಿಯವರ ಕೃಪಾಪೋಷಿತ ಅಭಿಯಾನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗದಗ ಶ್ರೀ, ಭಾಲ್ಕಿ ಶ್ರೀ ಸೇರಿದಂತೆ ಹಲವಾರು ಮಠಾಧೀಶರು, ಬಸವ ಭಕ್ತರು ನೀಡಿದ ದೇಣಿಗೆಯಿಂದ ಅಭಿಯಾನ ಮಾಡಲಾಗಿದೆ. ಇದರಲ್ಲಿ ಯಾವುದೇ ರಾಜಕಾರಣಿಗಳ ಹಣ ಬಳಸಿಕೊಂಡಿಲ್ಲ. ಸರ್ಕಾರವೂ ಸಹಾಯ ಮಾಡಿಲ್ಲ. ಕಾರ್ಯಕ್ರಮದ ಬಗ್ಗೆ ಲೆಕ್ಕ ಕೇಳುವ ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ವಕೀಲ ಶ್ರೀಕಾಂತ ಬೋರಾಳೆ, ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net