

ಭಾಲ್ಕಿ: ಬಸವಕಲ್ಯಾಣ ನಗರದಲ್ಲಿ ನ.29 ಮತ್ತು 30ರಂದು ಅನುಭವ ಮಂಟಪ ವಿಶ್ವ ಬಸವಧರ್ಮ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಅನುಭವ ಮಂಟಪ ಉತ್ಸವ ಮತ್ತು ಶರಣ ಕಮ್ಮಟ ಸಮಾರಂಭಕ್ಕೆ ಮಹಾರಾಷ್ಟ್ರದ ಕೋಲ್ಹಾಪುರ ಸಂಸದ ಶ್ರೀಮಂತ ಶಾಹು ಮಹಾರಾಜ್ ಅವರನ್ನು ಆಹ್ವಾನಿಸಲಾಗಿದೆ.
ಕೋಲ್ಹಾಪುರ ನಗರದಲ್ಲಿನ ಸಂಸದರ ನಿವಾಸಕ್ಕೆ ಇತ್ತೀಚೆಗೆ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನೇತೃತ್ವದಲ್ಲಿ ಪ್ರಮುಖರು ಭೇಟಿ ನೀಡಿ ಶ್ರೀಮಂತ ಶಾಹು ಅವರನ್ನು ಸನ್ಮಾನಿಸಿ, ಶರಣರು ನಾಡಿದಾಡಿದ ಭೂಮಿಯಲ್ಲಿ ಎರಡು ದಿನ ನಡೆಯಲಿರುವ ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ಭಾಗವಹಿಸುವಂತೆ ಕೋರಲಾಯಿತು.
ಸರಳಾತಾಯಿ ಪಾಟೀಲ್, ರಾಜಶೇಖರ ತಂಬಾಕೆ, ಯಶ್ ಅಂಬೋಲೆ, ರಾಜು ಜುಬರೆ, ಸುಭಾಷ ಮಹಾಜನ, ಸುರೇಶ ಜಾಂಬುರೆ, ವಿಜಯ ಪಾಟೀಲ್ ಇತರರಿದ್ದರು.