ತಾಲ್ಲೂಕುಮಟ್ಟದ ಕ್ರೀಡಾಕೂಟ 27ರಿಂದ

Published on

ಬೀದರ್: ಮೈ ಭಾರತ, ವಿದ್ಯಾಜ್ಯೋತಿ ಪ್ರೌಢಶಾಲೆ ಹಾಗೂ ಸ್ವಾಮಿ ವಿವೇಕಾನಂದ ಯುವಕ ಸಂಘದ ವತಿಯಿಂದ ಅಕ್ಟೋಬರ್ 27 ಹಾಗೂ 28 ರಂದು ಹುಲಸೂರಿನ ವಿದ್ಯಾಜ್ಯೋತಿ ಪ್ರೌಢಶಾಲೆ ಆವರಣದಲ್ಲಿ ಹುಲಸೂರು ತಾಲ್ಲೂಕುಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟದಲ್ಲಿ ಗುಂಪು ಹಾಗೂ ವೈಯಕ್ತಿಕ ವಿಭಾಗದ ಸ್ಪರ್ಧೆಗಳು ನಡೆಯಲಿವೆ. ಗುಂಪು ಸ್ಪರ್ಧೆಯಲ್ಲಿ ಯುವಕರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಯುವತಿಯರ ವಿಭಾಗದಲ್ಲಿ ಕಬಡ್ಡಿ ಸ್ಪರ್ಧೆ ಜರುಗಲಿವೆ.

ವೈಯಕ್ತಿಕ ಸ್ಪರ್ಧೆಗಳಲ್ಲಿ ಯುವಕರ ವಿಭಾಗದಲ್ಲಿ ವೇಟ್ ಲಿಫ್ಟಿಂಗ್, ಬ್ಯಾಡ್ಮಿಂಟನ್, ಯುವತಿಯರ ವಿಭಾಗದಲ್ಲಿ 100 ಮೀಟರ್ ಓಟ ಹಾಗೂ ಸ್ಲೋ ಸೈಕ್ಲಿಂಗ್ ಸ್ಪರ್ಧೆಗಳು ನಡೆಯಲಿವೆ.

ಸ್ಪರ್ಧೆಗಳ ವಿಜೇತರು ಜಿಲ್ಲಾಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ. ತಾಲ್ಲೂಕುಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವ 15 ರಿಂದ 29 ವರ್ಷಗಳ ಒಳಗಿನ ಆಸಕ್ತರು ಹೆಸರು ನೋಂದಾಯಿಸಬಹುದು ಎಂದು ಮೈ ಭಾರತ್‍ನ ಸೋಮನಾಥ ಪೂಜಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net