ಉಚಿತ ಆರೋಗ್ಯ ತಪಾಸಣೆ ಶಿಬಿರ 26ರಂದು

Dr Nanjundayya Swamy
Published on

ಬೀದರ್: ಡಾ. ಓಂಕಾರ ಸ್ವಾಮಿ ಅವರ ಪುಣ್ಯಸ್ಮರಣೆ ನಿಮಿತ್ತ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಮಲ್ಲಿನಾಥ ಆಯುರ್ವೇದಿಕ್ ಫಾರ್ಮಸಿಯಲ್ಲಿ ಅ.26ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ. ನಂಜುಂಡಯ್ಯ ಸ್ವಾಮಿ ಅವರು ಸ್ತ್ರೀ- ಪುರುಷ ಬಂಜೆತನ, ಬೊಜ್ಜು, ಸೋರಿಯಾಸಿಸ್, ಬಿಳಿ ತೊನ್ನು, ಕಿಡ್ನಿ ವೈಫಲ್ಯ, ಪಿ.ಸಿ.ಒ.ಡಿ, ಋತು ಸಮಸ್ಯೆ, ಕಿಡ್ನಿ, ಪಿತ್ತಕೋಶದಲ್ಲಿ ಕಲ್ಲು, ಅಸ್ತಮಾ, ಗ್ಯಾಂಗ್ರಿನ್ ಮೊದಲಾದ ಕಾಯಿಲೆಗಳ ತಪಾಸಣೆ ನಡೆಸಲಿದ್ದಾರೆ.

ಜಿಲ್ಲೆಯ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಶುಭ್ರ ಆರೋಗ್ಯ ಧಾಮದ ಮುಖ್ಯಸ್ಥೆ ಡಾ. ಪ್ರಭಾ ಸ್ವಾಮಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net