

ಬೀದರ್: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಬೀದರ್ ಘಟಕದ ನೂತನ ಅಧ್ಯಕ್ಷರಾಗಿ ಡಾ. ವಿಜಯ ಬಲ್ಲೂರಕರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು: ಡಾ. ಎಂ.ಡಿ. ಅಹಮೆದುದ್ದೀನ್, ಡಾ. ಪ್ರಜ್ಞಾ ಮದನಾ (ಉಪಾಧ್ಯಕ್ಷರು), ಡಾ. ಧರ್ಮರಾಜ ಬಿರಾದಾರ (ಕಾರ್ಯದರ್ಶಿ), ಡಾ. ಮಹೇಶ್ ಕಾಕನಾಳೆ (ಜಂಟಿ ಕಾರ್ಯದರ್ಶಿ) ಮತ್ತು ಡಾ. ಸಂದೀಪ್ ಗಾದಾ (ಖಜಾಂಚಿ).
ಸನ್ಮಾನ: ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ವಿಜಯ ಬಲ್ಲೂರಕರ್ ಅವರನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐ.ಎಂ.ಎ. ಹಾಲ್‍ನಲ್ಲಿ ಸನ್ಮಾನಿಸಲಾಯಿತು.
ಬಲ್ಲೂರಕರ್ ಅವರ ಅವಧಿಯಲ್ಲಿ ಐ.ಎಂ.ಎ ವತಿಯಿಂದ ವಿವಿಧ ಉತ್ತಮ ಕಾರ್ಯಗಳು ಆಗಲಿವೆ ಎಂದು ಕ್ಲಬ್ ಅಧ್ಯಕ್ಷ ಡಾ. ನಾಗೇಶ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಕ್ಲಬ್ ಕಾರ್ಯದರ್ಶಿ ರಾಜಕುಮಾರ ಅಳ್ಳೆ, ಖಜಾಂಚಿ ಬಸವರಾಜ ಮಡಕಿ, ಜಂಟಿ ಕಾರ್ಯದರ್ಶಿ ಸತೀಶಕುಮಾರ ಸ್ವಾಮಿ, ಸದಸ್ಯರಾದ ವೀರಶೆಟ್ಟಿ ಮಣಗೆ, ನಿತಿನ್ ಕರ್ಪೂರ, ಸುಮೀತ್ ಸಿಂದೋಲ್, ಚೇತನ್ ಮೇಗೂರ್ ಮತ್ತಿತರರು ಇದ್ದರು.