ಕಾಂಗ್ರೆಸ್ ಯುವ ಘಟಕಕ್ಕೆ ನಾಗಪ್ಪ ನೇಮಕ

Bidar South Youth Congress Nagappa Appointment
Published on

ಬೀದರ್: ಕಾಂಗ್ರೆಸ್ ಬೀದರ್ ದಕ್ಷಿಣ ಯುವ ಘಟಕದ ಕಾರ್ಯದರ್ಶಿಯಾಗಿ ನಾಗಪ್ಪ ಕುರಿಕಾಯಿನೋರ್ ಅವರನ್ನು ನೇಮಕ ಮಾಡಲಾಗಿದೆ.

ಬೀದರ್ ದಕ್ಷಿಣ ಯುವ ಘಟಕದ ಅಧ್ಯಕ್ಷ ಇಮ್ರಾನ್ ಖಾನ್ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಘೋಡಂಪಳ್ಳಿ ಗ್ರಾಮದ ನಾಗಪ್ಪ ಅವರು ಒಂದು ದಶಕದಿಂದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ನೇಮಕಾತಿ ಪತ್ರ ವಿತರಣೆ: ಬೀದರ್‍ನಲ್ಲಿ ನಾಗಪ್ಪ ಕುರಿಕಾಯಿನೋರ್ ಅವರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ವಿಶಾಲ್ ಪಾಟೀಲ, ಬೀದರ್ ದಕ್ಷಿಣ ಘಟಕದ ಉಪಾಧ್ಯಕ್ಷ ಗೋಪಾಲ್ ದೊಡ್ಡಿ, ಪ್ರಧಾನ ಕಾರ್ಯದರ್ಶಿ ರಾಹುಲ್, ಮುಖಂಡ ಶಿವಕುಮಾರ ಶಹಾಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net