151 ಜೋಡಿಗಳ ಸಾಮೂಹಿಕ ವಿವಾಹ

Samoohik Vivah
Published on

ಬೀದರ್: ನಗರದ ನೌಬಾದ್‍ನ ರಾಜೀವಗಾಂಧಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸರಳ ಸಾಮೂಹಿಕ ವಿವಾಹ ನಡೆಯಿತು.

151 ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಸತಿ-ಪತಿಗಳಾದರು.

ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಸಾಗರ್ ಖಂಡ್ರೆ ಅವರು, ಸರಳ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮದುವೆ ಹೆಸರಲ್ಲಿ ದುಂದು ವೆಚ್ಚ ಮಾಡಬಾರದು ಎಂದು ಸಲಹೆ ಮಾಡಿದರು.

ಆಣದೂರಿನ ಭಂತೆ ಧಮ್ಮಾನಂದ ಸಾನಿಧ್ಯ, ಖರ್ಗೆ ಶಾರದಾಬಾಯಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಚಪ್ಪ ಮಾಣಿಕರಾವ್ ಖರ್ಗೆ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರವೀಣ್ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಯುಗಪುರುಷ ಜೈರಾಜ ಚತುರೆ, ಕಾರ್ಯಕ್ರಮದ ಸಂಯೋಜಕ ಭೀಮರಾವ್ ಮಾಲಗತ್ತಿ, ಮುಖಂಡರಾದ ವಿನೋದಕುಮಾರ ಅಪ್ಪೆ, ಹಣಮಂತ ಮಲ್ಕಾಪುರ, ಸೂರ್ಯಕಾಂತ ಸಾಧುರೆ, ಅನಿಲಕುಮಾರ ಮೇಲ್ದೊಡ್ಡಿ, ವಿಠ್ಠಲದಾಸ್ ಪ್ಯಾಗೆ, ಧನರಾಜ ಹಂಗರಗಿ, ಮುಕೇಶ್ ಚಲ್ವಾ, ಪವನ್ ಮಿಠಾರೆ, ಮಾಣಿಕರಾವ್ ಮೇತ್ರೆ, ಶರಣಪ್ಪ ಚಂದನಹಳ್ಳಿ, ಮಲ್ಲಿಕಾರ್ಜುನ ಕಪಲಾಪುರೆ, ಮಿಲಿಂದ ಕಾಂಬಳೆ, ಅಮರ ಸಾಗರ್, ರಮಾದೇವಿ ಸ್ವಾಮಿ, ದಿಲೀಪ್, ಹರೀಶ್, ಗೌತಮ ಮುತ್ತಂಗಿಕರ್, ಚಂದ್ರಕಾಂತ ಕಾಂಬಳೆ, ದೇವರಾಜ ಪಾಟೀಲ, ರಾಜಶೇಖರ ಸೋರಳ್ಳಿ ಮತ್ತಿತರರು ಇದ್ದರು.

ಖರ್ಗೆ ಶಾರದಾಬಾಯಿ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್, ಜನತಾ ಪ್ರವೀಣ ಶಿಕ್ಷಣ ಸಂಸ್ಥೆ ಹಾಗೂ ಖರ್ಗೆ ಮಾಣಿಕರಾವ್ ಮೆಮೊರಿಯಲ್ ಶಿಕ್ಷಣ ಸಂಸ್ಥೆ ವತಿಯಿಂದ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net