ವಿದ್ಯಾರ್ಥಿಗಳು, ಉಪನ್ಯಾಸಕರಿಂದ ರಕ್ತದಾನ

Govt Polytechnic Blood Donation Camp Photo-2 - Copy
Published on

ಬೀದರ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸೇರಿ 18 ಮಂದಿ ರಕ್ತದಾನ ಮಾಡಿದರು.

ಬೀದರ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ರಕ್ತ ಸಂಗ್ರಹಿಸಿದರು. 18 ಯುನಿಟ್ ರಕ್ತ ಸಂಗ್ರಹವಾಯಿತು.

ರಕ್ತದಾನ ಮಾನವೀಯ ಕಾರ್ಯವಾಗಿದೆ. ಅರ್ಹರು ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಬೇಕು ಎಂದು ಉದ್ಘಾಟನೆ ನೆರವೇರಿಸಿದ ಬಿ.ಆರ್.ಐ.ಎಂ.ಎಸ್. ಪಥಾಲಜಿ ವಿಭಾಗದ ಡಾ. ಸಿದ್ಧಾರ್ಥ ಸೂರ್ಯವಂಶಿ ಹೇಳಿದರು.

ರಕ್ತದಾನ, ಶ್ರಮದಾನ ಮೊದಲಾದ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುತ್ತವೆ ಎಂದು ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.

ರಕ್ತದಾನದಿಂದ ತುರ್ತು ಅವಶ್ಯಕತೆ ಇರುವವರ ಜೀವ ಉಳಿಸಬಹುದು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿಜಯಕುಮಾರ ಎಸ್. ಜಾಧವ್ ಹೇಳಿದರು.

ರೆಡ್ ಕ್ರಾಸ್ ಘಟಕದ ಸಂಯೋಜಕ ಉಮೇಶ ತೇಗಂಪುರೆ, ವಕೀಲ್ ಪಟೇಲ್ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸಂಯೋಜಕ ಅರುಣ ಮೋಕಾಶಿ ಸ್ವಾಗತಿಸಿದರು. ಸಚಿನ್ ಜಿರೋಬೆ ವಂದಿಸಿದರು.

ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net