ಬಸವ ತತ್ವ ಅನುಭವಿಸಿ ಆಚರಿಸಿ

Prashad Nilay
Published on

ಬೀದರ್: ಬಸವ ತತ್ವಗಳಾದ ಪಂಚಾಚಾರ, ಷಟಸ್ಥಲ ಮತ್ತು ಅಷ್ಟಾವರಣಗಳನ್ನು ಆಳವಾಗಿ ಅನುಭವಿಸಿ ಆಚರಣೆಗೆ ತರಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 178ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವ ತತ್ವ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ವಚನ ಸಾಹಿತ್ಯವನ್ನು ನಿತ್ಯವೂ ಅಧ್ಯಯನ ಮಾಡಬೇಕು ಎಂದರು. ಬೆಂಗಳೂರಿನ ಬಸವ ತತ್ವ ಪ್ರಚಾರಕಿ ಭಾರತಿ ಕೆಂಪಯ್ಯ ಉಪನ್ಯಾಸ ನೀಡಿ, ಈ ಶರೀರ ಪಂಚಭೂತಗಳಿಂದ ಕೂಡಿದೆ. ಸದಾಚಾರ, ಲಿಂಗಾಚಾರ, ಶಿವಾಚಾರ, ಗಣಾಚಾರ ಮತ್ತು ಭತ್ಯಾಚಾರ. ಈ ಐದು ಜೀವನದಲ್ಲಿ ಕ್ರಿಯಾ ಜ್ಞಾನಗಳಿಂದ ಆಚರಣೆಯಲ್ಲಿ ತರಬೇಕು. ತ್ಯಾಗಾಂಗ, ಬೋಗಾಂಗ, ಯೋಗಾಂಗಗಳನ್ನು ಅಳವಡಿಸಿಕೊಂಡರೆ ಜೀವನ ಸಫಲವಾಗುತ್ತದೆ. ವ್ಯಕ್ತಿ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ ಪೂಜೆಯಲ್ಲಿ ತನ್ಮಯನಾಗಿದ್ದಾಗ ಅಂತರಾತ್ಮದ ಅರಿವು ಆಗುತ್ತದೆ ಎಂದು ಹೇಳಿದರು. ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ್ ಉದ್ಘಾಟಿಸಿ ಮಾತನಾಡಿದರು. ಡಾ.ಸುಜಾತಾ ಓಂಕಾರ ಜೋಜನೆ ಗುರುಬಸವ ಪೂಜೆ ನೆರವೇರಿಸಿದರು. ಶ್ರೀ ಮಹಾಲಿಂಗ ಸ್ವಾಮೀಜಿ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಸಂಚಾಲಕಿ ಸುವರ್ಣಾ ಚಿಮಕೋಡೆ, ಸಾಹಿತಿ ಜಯಶ್ರೀ ಸುಕಾಲೆ, ಪ್ರಮುಖರಾದ ಪ್ರೊ.ಉಮಾಕಾಂತ ಮೀಸೆ, ಶ್ರೀಕಾಂತ ಬಿರಾದಾರ್, ಪ್ರೊ.ಸಂಗ್ರಾಮ ಯಂಗಳೆ, ಮಲ್ಲಿಕಾರ್ಜುನ ಹುಡಗೆ, ಗುರುನಾಥ ಬಿರಾದಾರ್, ಬಸವರಾಜ ಹಳ್ಳೆ, ಆರ್.ಎಸ್. ಬಿರಾದಾರ್, ನಾಗಶೆಟ್ಟಿ ಚೋತೆಪ್ಪನವರ್, ಸಂಗ್ರಾಮಪ್ಪ ಬಿರಾದಾರ್, ಲಕ್ಷ್ಮೀಬಾಯಿ ಮಾಳಗೆ, ಕಸ್ತೂರಿಬಾಯಿ ಬಿರಾದಾರ್, ಶಕುಂತಲಾ ಮಲ್ಕಪ್ಪನೋರ್, ಮೀನಾಕ್ಷಿ ಪಾಟೀಲ್, ಸಂತೋಷ, ರೂಪಾ, ಮಹಾನಂದಾ ಸ್ವಾಮಿ, ಲಕ್ಷ್ಮೀ ಬಿರಾದಾರ್, ಜ್ಯೋತಿ ನಿನ್ನೆ, ತೀರ್ಥಮ್ಮರಡ್ಡಿ, ಶ್ಯಾಮರಾವ ಮ್ಯಾಕರೆ ಇತರರಿದ್ದರು. ಮಾಲಾಶ್ರೀ ಗುರುನಾಥ ಸ್ವಾಗತಿಸಿದರು. ರೇಣುಕಾ ಸಂತೋಷ ನಿರೂಪಣೆ ಮಾಡಿದರು. ಸಂಕೇತ ಬ್ಯಾಲಹಳ್ಳಿ ವಂದಿಸಿದರು. ಶಿವಶರಣಪ್ಪ ಕಮಠಾಣ, ಚನ್ನಬಸಪ್ಪ ನೌಬಾದೆ ಮತ್ತು ಶ್ರೀನಿವಾಸ ಪಾಪಡೆ ವಚನ ಗಾಯನ ನಡೆಸಿಕೊಟ್ಟರು.

ಶ್ರೀ ಬಸವಲಿಂಗ ಪಟ್ಟದ್ದೇವರು ಮಾತೃಹೃದಯಿ, ಪ್ರೀತಿ, ಪ್ರೇಮ, ವಾತ್ಸಲ್ಯದ ಗುರುಗಳು. ಈ ಭಾಗದಲ್ಲಿ ಸಂಸ್ಕಾರಯುತ ಶಿಕ್ಷಣ, ಸಾಮಾಜಿಕ, ಅಧ್ಯಾತ್ಮ ಜ್ಞಾನ, ಬಸವ ತತ್ವ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವಂಥ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. | ಬಾಬು ಹೊನ್ನಾನಾಯಕ್ ಕಾಡಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net